ಟ್ರೋಲ್ ಕುರಿತು ಬೇಸರ ಹೊರಹಾಕಿದ್ದ ರಶ್ಮಿಕಾ ಬೆಂಬಲಕ್ಕೆ ನಿಂತ ರಮ್ಯಾ...

Ramya Rashmikha
Published on

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ತಮ್ಮ ಟ್ರೋಲ್ ಮಾಡುತ್ತಾ, ಸದಾ ಕಾಲೆಳೆಯುತ್ತಿದ್ದವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ರಶ್ಮಿಕಾ ಈ ಬಗ್ಗೆ ಪೋಸ್ಟ್​ ಮಾಡುತ್ತಿದ್ದಂತೆ ವಿವಿಧ ಭಾಷೆಯ ಸಿನಿಮಾ ಮಂದಿ ರಶ್ಮಿಕಾ ಪರ ಧ್ವನಿಯೆತ್ತಿದ್ದಾರೆ.

ನಟಿ ರಮ್ಯಾ ಕೂಡ ರಶ್ಮಿಕಾ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ರಶ್ಮಿಕಾ ಮಾಡಿರುವ ಇನ್ಸ್​ಟಾಗ್ರಾಂ ಪೋಸ್ಟನ್ನು ರಿ-ಪೋಸ್ಟ್​ ಮಾಡಿ, ರಶ್ಮಿಕಾ ಅವರನ್ನು ಅವರಷ್ಟಕ್ಕೇ ಇರಲು ಬಿಡಿ ಎಂದು ಮನವಿ ಮಾಡಿದ್ದಾರೆ. ಇನ್ನೊಬ್ಬರ ಜೀವನದ ಬಗ್ಗೆ ನಮಗೆ ಅಭಿಪ್ರಾಯಗಳನ್ನು ಹೇರಲು ಸಾಧ್ಯವಾಗುವುದಿಲ್ಲ. ವಾಸ್ತವದಲ್ಲಿ ನಿಜಾಂಶ ಏನಿದೆ ಎಂಬುವ ಸತ್ಯ ಆ ವ್ಯಕ್ತಿಗೆ ಮಾತ್ರ ಗೊತ್ತಿರುತ್ತದೆ. ಟ್ರೋಲ್ ಮಾಡುವುದು ಯಾವತ್ತಿಗೂ ಇತಿಮಿತಿಯಲ್ಲಿ ಇರಬೇಕು ಎಂದು ರಮ್ಯಾ ಹೇಳಿದ್ದಾರೆ.

ರಶ್ಮಿಕಾ ಅಭಿಪ್ರಾಯಕ್ಕೆ ನಟ ದುಲ್ಖರ್ ಸಲ್ಮಾನ್, ನಟಿ ಹನ್ಸಿಕಾ, ತಾನ್ಯಾ ಹೋಪೆ ಮುಂತಾದ ನಟ, ನಟಿಯರು ಪ್ರತಿಕ್ರಿಯಿಸಿ ಬೆಂಬಲ ಸೂಚಿಸಿದ್ದಾರೆ.

‘ನನ್ನ ಕೆಲಸದ ಮೂಲಕ ನಿಮ್ಮೆಲ್ಲರನ್ನು ರಂಜಿಸಲು ಪರಿಶ್ರಮ ಪಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾನು ಹೆಚ್ಚು ಯೋಚಿಸುತ್ತೇನೆ. ನನ್ನ ಕೆಲಸ ಯಾವತ್ತೂ ನೀವೆಲ್ಲರೂ ಹೆಮ್ಮ ಪಡುವಂತೆ ಇರಲು ಪ್ರಯತ್ನಿಸುತ್ತೇನೆ. ಆದರೆ ನಾನಿಂದು ಹೇಳದೇ ಇರುವ ವಿಚಾರವೊಂದಕ್ಕೆ ನನ್ನನ್ನು ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಇದು ನನಗೆ ಅತೀವ ಬೇಸರ ತರಿಸಿದೆ’ ಎಂದು ರಶ್ಮಿಕಾ ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net