'ರಾಮಮಂದಿರ ಭೂಮಿ ಪೂಜೆಗೆ ದಯವಿಟ್ಟು ಬರಬೇಡಿ...ಅಂದು ಸಂಜೆ ಮನೆಯಲ್ಲಿ ದೀಪ ಹಚ್ಚಿ'

Ram Temple
Published on

ಅಯೋಧ್ಯಾ: ರಾಮನ ಭಕ್ತರು ಕಾಯುತ್ತಿದ್ದ ಘಳಿಗೆ ಸಮೀಪವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಎಲ್ ಸಿದ್ಧತೆ ನಡೆಯುತ್ತಿದ್ದು, ಆಗಸ್ಟ್​ 5ರಂದು ಭೂಮಿ ಪೂಜೆ ನಡೆಯಲಿದೆ.

ಕರೊನಾ ಸಾಂಕ್ರಾಮಿಕ ರೋಗ ಇರುವುದರಿಂದ ರಾಮಮಂದಿರ ನಿರ್ಮಾಣ ಭೂಮಿ ಪೂಜೆಯಲ್ಲಿ ಆಮಂತ್ರಿತರು, ಸಾರ್ವಜನಿಕರು ಸೇರಿ 250 ರಿಂದ 300 ಮಂದಿ ಅಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೇಳಿದೆ. ಆದರೂ ಅಲ್ಲಿಗೆ ಬರುವ ರಾಮನ ಭಕ್ತರನ್ನು ತಡೆಯುವುದದಾರೂ ಹೇಗೆ ಎಂಬ ಚಿಂತೆಯೂ ಆಡಳಿತಕ್ಕೆ ಕಾಡುತ್ತಿದೆ.

ಈ ಬಗ್ಗೆ ಟ್ರಸ್ಟ್ ಇಂದು ಮನವಿಯೊಂದನ್ನೂ ಮಾಡಿದ್ದು, ದಯವಿಟ್ಟು ಭೂಮಿಪೂಜೆಗೆ ಭಕ್ತರು ಆಗಮಿಸಬೇಡಿ. ನಿಮ್ಮ ಮನೆಯ ಟಿವಿಯಲ್ಲಿ ಸಮಾರಂಭವನ್ನು ನೋಡಿ ಎಂದು ಹೇಳಿದೆ.

ಕರೊನಾ ಸಾಂಕ್ರಾಮಿಕ ರೋಗ ಇರುವುದರಿಂದ ಜಾಸ್ತಿ ಸಂಖ್ಯೆಯಲ್ಲಿ ಇಲ್ಲಿಗೆ ಬಂದರೆ ತುಂಬ ತೊಂದರೆಯಾಗುತ್ತದೆ. ರಾಮಮಂದಿರ ಭೂಮಿ ಪೂಜೆಯನ್ನು ಟಿವಿಯಲ್ಲಿ ನೋಡಿ, ಅಂದು ಸಂಜೆ ನಿಮ್ಮ ಮನೆಯಲ್ಲಿ ದೀಪ ಬೆಳಗಿ ಪ್ರಾರ್ಥನೆ ಮಾಡಿ ಎಂದು ರಾಮಜನ್ಮಭೂಮಿ ಟ್ರಸ್ಟ್​ ಮನವಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕರೊನಾ ಚಿಕಿತ್ಸೆಗೆ 5 ಲಕ್ಷ ರೂ. ಬಿಲ್​, ಅಪೋಲೋ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

ಭೂಮಿ ಪೂಜೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಾರೆ ಎಂದು ಟ್ರಸ್ಟ್​ನ ಸದಸ್ಯರೋರ್ವರು ತಿಳಿಸಿದ್ದರೂ, ಪ್ರಧಾನಿ ಕಚೇರಿ ಅದನ್ನಿನ್ನೂ ಸ್ಪಷ್ಟಪಡಿಸಿಲ್ಲ. ಹಾಗೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಾವು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net