More

    ರೈಲು ಪ್ರಯಾಣಿಕನಿಗೆ ಮರುಜೀವ ನೀಡಿದ ಭದ್ರತಾ ಸಿಬ್ಬಂದಿ! ಸಿಸಿಟಿವಿಯಲ್ಲಿ ಸೆರೆ

    ಮುಂಬೈ: ಆಯಸ್ಸು ಗಟ್ಟಿಯಾಗಿದ್ದರೆ, ಯಾರಾದರೂ ಹೇಗಾದರೂ ಜೀವದಾನ ಮಾಡಿಯೇಬಿಡುತ್ತಾರೆ. ಕೂದಲೆಳೆ ಅಂತರದಲ್ಲಿ ಸಾಯುವುದು ಹೇಗಾದರೂ ತಪ್ಪುತ್ತದೆ ಎನ್ನುವುದಕ್ಕೆ ಸಾಕ್ಷಿ ಈ ಸುದ್ದಿ.

    ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯೊಬ್ಬರನ್ನು ಕೂದಲೆಳೆ ಅಂತರದಲ್ಲಿ ಭದ್ರತಾ ಸಿಬ್ಬಂದಿ ರಕ್ಷಿಸಿರುವ ಘಟನೆ ಇದಾಗಿದೆ. ಮುಂಬೈ ಕಲ್ಯಾಣ್ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

    ದಿಲೀಪ್ ಮಂಡಗೆ ಎಂಬ ಪ್ರಯಾಣಿಕರು ‌ಚಲಿಸುತ್ತಿದ್ದ ರೈಲಿನಿಂದ ಹೊರಗೆ ಜಿಗಿಯಲು ಪ್ರಯತ್ನಿಸಿದ್ದರು. ಈ ವೇಳೆ ಆಯತಪ್ಪಿದ ಬಿದ್ದುಬಿಟ್ಟರು. ಬೇರೆಲ್ಲೋ ನೋಡುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಅದ್ಯಾವುದೋ ಮಾಯೆಯಲ್ಲಿ ಓಡಿ ಬಂದು ದಿಲೀಪ್ ಅವರನ್ನು ರಕ್ಷಣೆ ಮಾಡಿದ್ದಾರೆ.

    ಆಗಿದ್ದೇನೆಂದರೆ ದಿಲೀಪ್ ಮಗನೊಂದಿಗೆ ಮುಂಬೈನಿಂದ ಕಯಾಮತಿ ಎಕ್ಸ್‌ಪ್ರೆಸ್‌ ಮೂಲಕ ಮಧ್ಯಪ್ರದೇಶದ ಬುರಹಾನಪುರಕ್ಕೆ ಹೊರಟಿದ್ದರು. ಅವರಿಗೆ ತಿಳಿಯದೇ ಇಬ್ಬರೂ ಬೇರೆ ರೈಲು ಹತ್ತಿಬಿಟ್ಟರು. ಹತ್ತಿದ ಮೇಲೆ ಅವರಿಗೆ ವಿಷಯ ತಿಳಿದಿದೆ. ಕೂಡಲೇ ಮಗ ಬ್ಯಾಗ್ ಹೊರಗೆ ಎಸೆದು ಜಿಗಿದಿದ್ದಾರೆ. ಆದರೆ ದಿಲೀಪ್‌ ಜಿಗಿಯುವ ಭರದಲ್ಲಿ ಆಯತಪ್ಪಿ ಬಿದ್ದುಬಿಟ್ಟಿದ್ದಾರೆ.

    ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಇದು ರೈಲ್ವೆ ನಿಲ್ದಾಣದಲ್ಲಿ ಇರುವ ಸಿಸಿಟಿವಿಯಲ್ಲಿ ದಾಖಲಾಗಿದೆ. ದೇವರಂತೆ ಬಂದು ದಿಲೀಪ್‌ ಅವರನ್ನು ಕಾಪಾಡಿದ ಭದ್ರತಾ ಸಿಬ್ಬಂದಿ ಹೆಸರು ಸೋಮನಾಥ್ ಮಹಾಜನ್. ಅವರ ಜತೆ ಎಸ್‍ಐಪಿಎಫ್ ಅಧಿಕಾರಿ ಕೆ.ಸಾಹು ಕೂಡ ನೆರವಿಗೆ ಧಾವಿಸಿದ್ದರು.

    ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts