More

    ರಾಮನ ಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಠಾಪನೆ

    ಕಂಪ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ಪ್ರತಿಷ್ಠಾಪಿಸಲಿರುವ ದಿನ, ಪ್ರತಿ ಮನೆಯಲ್ಲಿ ದೀಪ ಬೆಳಗಿಸುವ ಮೂಲಕ ಪ್ರಾರ್ಥನೆ ಸಲ್ಲಿಸಬೇಕು ಎಂದು ವೈನಾಡಿನ ಸ್ವರ ಸಂಘ ಸಂಚಾಲಕ ದಾಮೋದರಜೀ ಹೇಳಿದರು.

    ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ಸಿಗದ ಆಮಂತ್ರಣ: ಉದ್ಧವ್​ ಠಾಕ್ರೆ ಹೇಳಿದ್ದೇನು?

    ಸಮೀಪದ ಎಮ್ಮಿಗನೂರು ಗ್ರಾಮದ ತಳವಾರಪೇಟೆಯ ಶ್ರೀರಾಮ ದೇವಸ್ಥಾನದಲ್ಲಿ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷತೆ, ಭಾವಚಿತ್ರ, ಕರಪತ್ರಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ದೇಶದ ಪ್ರತಿಯೊಬ್ಬರಿಗೂ ಸಂತಸದ ವಿಚಾರವಾಗಿದೆ. ಪ್ರತಿಷ್ಠಾಪನಾ ದಿನದಂದು ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ ನೆರವೇರಿಸುವ ಮೂಲಕ ಭಕ್ತಿಯನ್ನು ಸಮರ್ಪಿಸಬೇಕು ಎಂದರು.

    ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಭಕ್ತಿ ಸಮರ್ಪಣೆ

    ಸಂಚಾಲಕರಾದ ರವಿಕುಮಾರಜೀ, ರಾಜೇಶ್ ಆಚಾರ್‌ಜೀ, ಗ್ರಾಮದ ಮುಖಂಡರಾದ ಈರಣ್ಣ, ರಂಗಪ್ಪ, ಹುಲುಗಪ್ಪ, ಧರ್ಮಣ್ಣನವರ ಮುದಿಯಪ್ಪ, ಎಸ್.ರಾಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts