More

    ರಾಮಮಂದಿರ ಉದ್ಘಾಟನೆಗೆ ಸಿಗದ ಆಮಂತ್ರಣ: ಉದ್ಧವ್​ ಠಾಕ್ರೆ ಹೇಳಿದ್ದೇನು?

    ಮುಂಬೈ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ.

    ಇದನ್ನೂ ಓದಿ: ಬಾಲಿವುಡ್​ ಜನಪ್ರಿಯ ನಟಿ ದೀಪಶಿಖಾ:20ನೇ ವಯಸ್ಸಿಗೆ ವಿವಾಹ, 2ಬಾರಿ ವಿಚ್ಛೇದನ, ಈಗ…
    ಅಯೋಧ್ಯೆಯಲ್ಲಿ ಅದ್ಧೂರಿ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಿನಿಮಾ, ರಾಜಕೀಯ, ಸಾರ್ವಜನಿಕ ಕ್ಷೇತ್ರ ಸೇರಿ ಎಲ್ಲಾ ಕ್ಷೇತ್ರಗಳ 6 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆದರೆ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್​ ಠಾಕ್ರೆಗೆ ಆಹ್ವಾನ ನೀಡಿಲ್ಲ ಎನ್ನಲಾಗಿದೆ.

    ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಉದ್ಧವ್​ ಠಾಕ್ರೆ ಅವರು, ನನಗೆ ಇದುವರೆಗೂ ಯಾವುದೇ ಆಹ್ವಾನ ಬಂದಿಲ್ಲ. ನಾನು ಅಯೋಧ್ಯೆಗೆ ಭೇಟಿ ನೀಡುವ ಅಗತ್ಯವೂ ಇಲ್ಲ. ಶ್ರೀರಾಮ ಎಲ್ಲರಿಗೂ ಸೇರಿದವನು. ನನಗೆ ಇಷ್ಟವಾದಾಗ ನಾನು ಹೋಗುತ್ತೇನೆ. ರಾಮಮಂದಿರ ಚಳುವಳಿಗೆ ಶಿವಸೇನೆ ಸಾಕಷ್ಟು ಕೊಡುಗೆ ನೀಡಿದೆ ಎಂದು ತಿರುಗೇಟು ನೀಡಿದ್ದಾರೆ.

    ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆ ನಮ್ಮ ಹೆಮ್ಮೆ ಮತ್ತು ಸ್ವಾಭಿಮಾನ ವಿಷಯ. ಜನವರಿ 22 ನಾಸಿಕ್​ನಲ್ಲಿರುವ ಕಾಲಾರಾಮ್ ದೇವಸ್ಥಾನಕ್ಕೆ ಸಂಜೆ 6.30 ಗಂಟೆಗೆ ಭೇಟಿ ನೀಡುತ್ತೇವೆ. ಅಂದು ರಾತ್ರಿ 7.30ಕ್ಕೆ ಗೋದಾವರಿ ನದಿಯ ದಡದಲ್ಲಿ ಮಹಾ ಆರತಿ ನಡೆಸಲಿದ್ದೇವೆ ಎಂದು ಠಾಕ್ರೆ ತಿಳಿಸಿದ್ದಾರೆ.

    ಅಮೆರಿಕಾದ ಹೈಪ್ರೊಫೈಲ್​ ಸೆಕ್ಸ್​ ಸ್ಕ್ಯಾಂಡಲ್​: ದ್ವೀಪಕ್ಕೆ ಭೇಟಿ ನೀಡಿದ 2 ವರ್ಷದ ನಂತರ ಟಾಪ್ ಮಾಡೆಲ್ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts