More

    ಅಮೆರಿಕಾದ ಹೈಪ್ರೊಫೈಲ್​ ಸೆಕ್ಸ್​ ಸ್ಕ್ಯಾಂಡಲ್​: ದ್ವೀಪಕ್ಕೆ ಭೇಟಿ ನೀಡಿದ 2 ವರ್ಷದ ನಂತರ ಟಾಪ್ ಮಾಡೆಲ್ ಆತ್ಮಹತ್ಯೆ!

    ವಾಷಿಂಗ್ಟನ್:ಅಮೆರಿಕಾದ ಹೈ ಪ್ರೊಫೈಲ್​ ಸೆಕ್ಸ್​ ಸ್ಕ್ಯಾಂಡಲ್​ಗೆ ಸಂಬಂಧಿಸಿದಂತೆ ಮತ್ತಷ್ಟು ವಿಷಯಗಳು ಬೆಳಕಿಗೆ ಬಂದಿವೆ. ಪ್ರಮುಖ ಫೈನಾನ್ಶಿಯರ್,​ ಕುಖ್ಯಾತ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನ ಖಾಸಗಿ ವಿಮಾನದಲ್ಲಿ ಆತನ “ಪೀಡೋಫಿಲ್ ಐಲ್ಯಾಂಡ್ ಬಂಗ್ಲಾ” ಗೆ ಹೋಗಿದ್ದ ಟಾಪ್​ ಮಾಡೆಲ್​ 2ವರ್ಷದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದ ರಹಸ್ಯ ಪತ್ರಗಳ ಮೂಲಕ ಈ ವಿಷಯ ಹೊರಬಂದಿದೆ.

    ಇದನ್ನೂ ಓದಿ: ಬಾಲಿವುಡ್​ ಜನಪ್ರಿಯ ನಟಿ ದೀಪಶಿಖಾ:20ನೇ ವಯಸ್ಸಿಗೆ ವಿವಾಹ, 2ಬಾರಿ ವಿಚ್ಛೇದನ, ಈಗ…
    ರಷ್ಯಾದ ರುಸ್ಲಾನಾ ಕೊರ್ಶುನೋವಾ 2008ರಲ್ಲಿ ನ್ಯೂಯಾರ್ಕ್‌ನ ತನ್ನ ಐಷಾರಾಮಿ ವಾಲ್ ಸ್ಟ್ರೀಟ್ ಅಪಾರ್ಟ್‌ಮೆಂಟ್‌ನ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೆ ಸರಿಯಾಗಿ 2ವರ್ಷದ ಹಿಂದೆ ಆಕೆ ಎಪ್ಸ್ಟೀನ್‌ನ “ಲೋಲಿಟಾ ಎಕ್ಸ್‌ಪ್ರೆಸ್” ವಿಮಾನದಲ್ಲಿ ಆತನ ಜೊತೆಯಲ್ಲಿ ಆತನ ಬಂಗಲೆಗೆ ಹೋಗಿ ಬಂದಿದ್ದಳು. ಬಡ, ಮಧ್ಯಮ ವರ್ಗದ ಬಾಲಕಿಯರು, ಯುವತಿಯರನ್ನು ಭಾರಿ ಮೊತ್ತದ ಹಣ ನೀಡಿ ಆಕರ್ಷಿಸಿ ತನ್ನ ದ್ವೀಪ ಬಂಗಲೆಯಲ್ಲಿ ಲೈಂಗಿಕವಾಗಿ ವೇದಿಸಿ, ಬಳಿಕ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

    ವಿಮಾನದ ಲಾಗ್​ಬುಕ್​ ವಿವರಗಳ ಪ್ರಕಾರ ಕೊರ್ಶುನೋವಾ ಮಾರ್ಕ್ ಜೇಕಬ್ಸ್, ಡಿಕೆಎನ್ ವೈ, ಮತ್ತು ವೆರಾ ವಾಂಗ್‌ನಂತಹ ಉನ್ನತ ವಿನ್ಯಾಸಕರು ಮತ್ತು ಬ್ರಾಂಡ್‌ಗಳಿಗಾಗಿ ಮಾಡೆಲ್ ಕೊರ್ಶುನೋವಾ ವ್ಯವಹರಿಸಿದ್ದರು. ವಿಮಾನದಲ್ಲಿ ಆಕೆ ತೆರಳಿದ್ದಾಗ ಕೇವಲ 18ವರ್ಷ.
    ಎಪ್ಸ್ಟೀನ್ ನನ್ನು ಬಂಧಿಸುವ ಕೆಲವೇ ವಾರಗಳ ಮೊದಲು ಇಬ್ಬರೂ ಜೊತೆಯಲ್ಲೇ ಪ್ರಯಾಣಿಸಿದ್ದರು. ವಿಮಾನದಲ್ಲಿ, ಎಪ್ಸ್ಟೀನ್ ಮತ್ತು ಕೊರ್ಶುನೋವಾ ಅವರ ಅಂಗರಕ್ಷಕ, ವೈಯಕ್ತಿಕ ಬಾಣಸಿಗ ಮತ್ತು ಸಹಾಯಕರು, ಮಾಜಿ ಯುಎಫ್​ಸಿ ಫೈಟರ್ ಸ್ಟೆಫನಿ ಟಿಡ್ವೆಲ್ ಎಂದು ಗುರುತಿಸಲಾದ ಇನ್ನೊಬ್ಬ ಮಹಿಳೆ ನಂತರ ವಿಮಾನದಲ್ಲಿದ್ದರು.

    ಎಪ್ಸ್ಟೀನ್ ಪ್ರಸಿದ್ಧ ವ್ಯಕ್ತಿಗಳನ್ನು ಒಳಗೊಂಡಿರುವ ಲೈಂಗಿಕ ಪಾರ್ಟಿಗಳನ್ನು ಆಯೋಜಿಸಲು ತಿಳಿದಿರುವ ದ್ವೀಪವನ್ನು ತಲುಪಿದ ನಂತರ ಏನಾಯಿತು ಎಂಬುದರ ಕುರಿತು ಯಾವುದೇ ವಿವರಗಳಿಲ್ಲ.

    “ರಷ್ಯನ್ ರಾಪುಂಜೆಲ್”
    20 ವರ್ಷದ ಕುರ್ಶುನೋವಾ ತನ್ನ ಉದ್ದನೆಯ ಇಳಿಜಾರಿದ ಕೂದಲಿನಿಂದ “ರಷ್ಯನ್ ರಾಪುಂಜೆಲ್” ಎಂದು ಕರೆಯಲ್ಪಟ್ಟಿದ್ದಳು. ಮಾಡೆಲಿಂಗ್‌ನಲ್ಲಿ ಮುಂದೆ ದೊಡ್ಡಮಟ್ಟಕ್ಕೆ ಆಕೆ ಏರುತ್ತಾಳೆಂದು ಎಲ್ಲರೂ ಭಾವಿಸಿದ್ದರು. ಆದರೆ 20 ವರ್ಷಕ್ಕೇ ಆಕೆ ಇನ್ನಿಲ್ಲದಂತಾಗಿದ್ದು, ಆಕೆ ಅಭಿಮಾನಿಗಳು ಮತ್ತು ಸಾರ್ವಜನಿಕರನ್ನು ದಿಗ್ಭ್ರಾಂತಿಗೆ ದೂಡಿತ್ತು.

    ಸಾಯುವ ಮೊದಲು ಅವಳು ತನ್ನ ಪ್ರೇಮ ಜೀವನದಲ್ಲಿನ ಸಮಸ್ಯೆಗಳ ಬಗ್ಗೆ ಸಂದೇಶಗಳನ್ನು ಕಳುಹಿಸಿದಳು. ಅವಳು ತನ್ನ ಮನೆ ಮತ್ತು ಕುಟುಂಬವನ್ನು ದೂರಮಾಡಿಕೊಂಡಳು. ಅವಳು ಸಾಯುವ ಒಂದು ತಿಂಗಳ ಮೊದಲು ಸಾಕಷ್ಟು ತೂಕವನ್ನು ಕಳೆದುಕೊಂಡಿದ್ದಳು. ವೈಯಕ್ತಿಕ ಜೀವನವನ್ನು ತನ್ನ ಕೆಲಸದ ಜೊತೆಗೆ ಸಮತೋಲನಗೊಳಿಸಲು ಹೆಣಗಾಡುತ್ತಿದ್ದಳು ಎಂದು ಆಕೆಯ ಮಾಜಿ ಗೆಳೆಯ ಹೇಳಿದ್ದ ಎನ್ನಲಾಗಿದೆ.

    ಅಯೋಧ್ಯೆ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ: ಜ.22ರಂದು ರಾಷ್ಟ್ರವ್ಯಾಪಿ ನೇರ ಪ್ರಸಾರಕ್ಕೆ ಬಿಜೆಪಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts