More

    ಅಯೋಧ್ಯೆ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ: ಜ.22ರಂದು ರಾಷ್ಟ್ರವ್ಯಾಪಿ ನೇರ ಪ್ರಸಾರಕ್ಕೆ ಬಿಜೆಪಿ ಸಜ್ಜು

    ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಮತ್ತು ಬಾಲರಾಮ ಮೂರ್ತಿಯ ಪ್ರತಿಷ್ಠಾಪನಾ ಸಮಾರಂಭವನ್ನು ದೇಶಾದ್ಯಂತ ಬೂತ್ ಮಟ್ಟದಲ್ಲಿ ನೇರ ಪ್ರಸಾರ ಮಾಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೋಜನೆ ಸಿದ್ಧಪಡಿಸಿದೆ.

    ಇದನ್ನೂ ಓದಿ: ಖಾಸಗಿ ಬಸ್‌ಗಳಿಗೂ ‘ಶಕ್ತಿ’: 2 ತಿಂಗಳೊಳಗೆ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ
    ಜ. 22ರಂದು ಬೂತ್ ಮಟ್ಟದಲ್ಲಿ ನೇರ ಪ್ರಸಾರಕ್ಕಾಗಿ ದೊಡ್ಡ ಟಿವಿ ಪರದೆಗಳನ್ನು ಸ್ಥಾಪಿಸಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಜನಸಾಮಾನ್ಯರೂ ಪ್ರತಿ ಗ್ರಾಮದಲ್ಲೂ ಬಾಲರಾಮ ವಿಗ್ರಹದ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ಅನುಕೂಲವಾಗಬೇಕು. ದೇಶಾದ್ಯಂತ ಪ್ರತಿಯೊಬ್ಬರೂ ವೀಕ್ಷಿಸಲು ಸಹಕಾರಿಯಾಗಬೇಕು ಎಂಬ ಉದ್ದೇಶದೊಂದಿಗೆ ಬಿಜೆಪಿ ಪ್ರಸಾರ ಸಾಧನ ಒದಗಿಸಲು ಸಜ್ಜಾಗಿದೆ.

    ಇನ್ನು ಸಾರ್ವಜನಿಕರು ಶ್ರೀರಾಮ ದೇವರ ವಿಗ್ರಹದ ಪ್ರತಿಷ್ಠಾಪನೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವೈಯಕ್ತಿಕವಾಗಿ ಪ್ರಸಾದ, ಹಣ್ಣು ವಿತರಿಸಬಹುದು. ಬಡವರಿಗೆ ಬಟ್ಟೆ, ಕಂಬಳಿಗಳನ್ನು ದಾನವಾಗಿ ವಿತರಿಸಬಹುದು. ಎಲ್ಲೆಡೆ ಕಾರ್ಯಕ್ರಮ ಹಬ್ಬದ ರೀತಿ ಆಯೋಜಿಸಬೇಕು. ಆಹಾರ ಅಥವಾ ಹಣ್ಣುಗಳ ವಿತರಣೆಗೆ ದೇಣಿಗೆ ಮೂಲಕ ಸಂಗ್ರಹಿಸಿ ವಿತರಿಸಬಹುದು ಎಂದು ಪಕ್ಷವು ಈಗಾಗಲೇ ಕಾರ್ಯಕರ್ತರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

    ಜ.16 ರಿಂದಲೇ ಧಾರ್ಮಿಕ ಕಾರ್ಯಕ್ರಮ: ಜ. 22 ರಂದು ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳಿಂದ ಅತಿಥಿಗಳುಭಾಗವಹಿಸಲಿದ್ದಾರೆ. ಬಾಲರಾಮ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಅಂದರೆ ಜ.16 ರಂದು ಪ್ರಾರಂಭವಾಗುತ್ತವೆ. ವಾರಣಾಸಿಯ ಅರ್ಚಕರಾದ ಲಕ್ಷ್ಮೀಕಾಂತ್ ದೀಕ್ಷಿತ್ ಜ. 22 ರಂದು ರಾಮ್ ಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭದ ಮುಖ್ಯ ವಿಧಿಗಳನ್ನು ನಿರ್ವಹಿಸಲಿದ್ದಾರೆ. ಜ.14 ರಿಂದ ಜ. 22 ನಾನಾ ಧಾರ್ಮಿಕ ಕಾರ್ಯಕ್ರಮಗಳು ಅಯೋಧ್ಯೆಯಲ್ಲಿ ನಡೆಯುತ್ತಿರುತ್ತವೆ. 1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

    ಅಯೋಧ್ಯೆಯಲ್ಲಿ ಸಾವಿರಾರು ಭಕ್ತರಿಗೆ ಸ್ಥಳಾವಕಾಶ ಕಲ್ಪಿಸಲು ಹಲವಾರು ಟೆಂಟ್ ಸಿಟಿಗಳನ್ನು ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮ ಸುವ್ಯವಸ್ಥೆಗೆ 10,000-15,000 ಕಾರ್ಯಕರ್ತರು ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ತಿಳಿಸಿದೆ. ಭದ್ರತಾ ಸಿಬ್ಬಂದಿ ಜತೆಗೆ ವಸ್ಥಳೀಯ ಅಧಿಕಾರಿಗಳು, ಸ್ವಯಂ ಸೇವಕರು ಭವ್ಯ ಸಮಾರಂಭದ ಸುತ್ತ ಜನಜಂಗುಳಿ ಏರ್ಪಡದಂತೆ ನೋಡಿಕೊಳ್ಳಲಿದ್ದಾರೆ.

    ದೆಹಲಿಯ ಪ್ರಾಚೀನ ದೇವಾಲಯದ ದ್ವಾರದ ಬಾಗಿಲು ಕೆಡವಿದ್ದಕ್ಕೆ ಲೆಫ್ಟಿನೆಂಟ್ ಗವರ್ನರ್ ಪ್ರತಿಕ್ರಿಯೆ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts