More

    ಶಿವಪ್ರೇರಣೆ.. ಎಲ್ಲೆಡೆ ರಾಮತತ್ವ ಬಿತ್ತನೆ..

    ಪ್ರಶಾಂತ ಭಾಗ್ವತ, ಉಡುಪಿ
    ದೇವಪ್ರೇರಣೆಯಿಂದ ಅಧ್ಯಾತ್ಮ ಲೋಕವನ್ನು ನೆಚ್ಚಿಕೊಂಡ ಹಲವರ ಕುರಿತು ಪುರಾಣ ಅಥವಾ ಇತಿಹಾಸಗಳಿಂದ ತಿಳಿದಿದ್ದೇವೆ. ಅದೇರೀತಿ ಶಿವಪ್ರೇರಣೆಗೆ ಒಳಗಾದ ವಿನಯರಾಮ್​ ಹಳೇಮನೆ ಎಂಬವರು ಶ್ರೀರಾಮಚಂದ್ರನ ಆದರ್ಶವನ್ನು ತಿಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

    2022ರ ಡಿಸೆಂಬರ್​ 31ರಿಂದ ಸನಾತನ ಧರ್ಮದ ಜಾಗೃತಿಯೊಂದಿಗೆ ಶ್ರೀರಾಮನ ಚಿಂತನೆಯನ್ನು ಜನಮಾನಸಕ್ಕೆ ತಲುಪಿಸುತ್ತಿದ್ದಾರೆ. ಅಯೋಧ್ಯಾ ರಾಮ ಮಂದಿರದ ಮಾದರಿಯೊಂದಿಗೆ ರಾಜ್ಯಾದ್ಯಂತ ನಿರಂತರ ಪಯಣ ನಡೆಸಿ, ರಾಮತತ್ವ ಬಿತ್ತರಿಸುತ್ತಿದ್ದಾರೆ.

    ಥರ್ಮಾಕೋಲ್​ ಬಳಕೆ

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುವುದಕ್ಕೂ ಒಂದು ವರ್ಷ ಮುಂಚೆಯೇ ವಿನಯ್​ರಾಮ್​ ತಮ್ಮದೇ ಕಲ್ಪನೆಯಲ್ಲಿ ರಾಮ ಮಂದಿರದ ಹೊರ& ಒಳ ಮಾದರಿ ರಚಿಸಿದ್ದಾರೆ. 80 ಕೆಜಿ ಥರ್ಮಾಕೋಲ್​, ಟೂತ್​ಪೀಕ್​, ಅಕ್ರಾಲಿಕ್​ ವಾಟರ್​ ಪೇಂಟ್​, ಗುಂಡುಪಿನ್​ ಹಾಗೂ ಗಮ್​​ ಬಳಸಿ ಮಂದಿರ ಕಟ್ಟಿದ್ದಾರೆ. ಇದು ಸಂಚಾರಿ ಮಂದಿರ ಆಗಿರುವುದರಿಂದ ಅದನ್ನು ಬಿಡಿಸಿಟ್ಟು ಮತ್ತೆ ಕಟ್ಟುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.

    108 ಪ್ರದರ್ಶನ

    ಮಾದರಿ ಮಂದಿರವನ್ನು ರಾಜ್ಯದ 108 ಕಡೆಗಳಲ್ಲಿ ಪ್ರದರ್ಶನ ಮಾಡುವ ಗುರಿ ಹೊಂದಿದ್ದು, ಏ.17ರ ವರೆಗೆ ಉಡುಪಿಯಲ್ಲಿ 61ನೇ ಪ್ರದರ್ಶನ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ 36, ಮೈಸೂರಿನಲ್ಲಿ 13 ಪ್ರದರ್ಶನ ನೀಡಿದ್ದಾರೆ. ಮೈಸೂರಿನ ರಿಸರ್ವ್​ ಬ್ಯಾಂಕ್​ ಆ್​ ಮೈಸೂರು (ನೋಟು ಮುದ್ರಣ ಸಂಸ್ಥೆ) ಇಲ್ಲಿಯೂ ಪ್ರದರ್ಶನ ನೀಡಿದ್ದು ಇವರ ಹೆಗ್ಗಕೆ. ಕೊಪ್ಪಳ, ಅಂಜನಾದ್ರಿಬೆಟ್ಟ, ಮಂತ್ರಾಲಯ ರಾಯರ ಮಠ, ಶೃಂಗೇರಿ ಶಂಕರ ಮಠ, ಹರಿಹರಪುರ ಮಠ, ಶಕಟಾಪುರ, ತೀರ್ಥಹಳ್ಳಿ ಭೀಮನಕಟ್ಟೆ ಹೀಗೆ ವಿವಿಧೆಡೆ ಪ್ರದರ್ಶನ ನೀಡಿದ್ದಾರೆ.

    ಜನರ ಮುತ್ತಿಗೆ

    ಅಯೋಧ್ಯೆಯ ಮಂದಿರದಂತೆಯೇ ಮೂರು ಮಹಡಿ ರಚಿಸಿದ್ದು, ನೆಲಮಹಡಿಯಲ್ಲಿ ಬಾಲರಾಮನ ಭಾವಚಿತ್ರ ಅಳವಡಿಸಿದ್ದಾರೆ. ಆರಂಭದಲ್ಲಿ ರಾಮ&ಸೀತೆ, ಭರತ-ಲಕ್ಷ$್ಮಣ ಹಾಗೂ ಹನುಮ ಇರುವ ಚಿಕ್ಕ ಮೂರ್ತಿ ಅಳವಡಿಸಿದ್ದರು. 1ನೇ ಮಹಡಿಯಲ್ಲಿ ಸೀತಾ ಸಹಿತ ಪಟ್ಟಾಭಿರಾಮನ ದರ್ಬಾರ್​ ಹಾಲ್​ ಇದ್ದು, 2ನೇ ಮಹಡಿ ಸದ್ಯ ಖಾಲಿಯಿದೆ. ಮಂದಿರದ ಒಳಗೆ ಲೈಟಿಂಗ್​ ವ್ಯವಸ್ಥೆ ಮಾಡಿದ್ದರಿಂದ ಇನ್ನಷ್ಟು ಆಕರ್ಷಣೀಯವಾಗಿದೆ. ಮಂದಿರ ನೋಡಲು ಜನರು ಮುಗಿಬೀಳುತ್ತಿದ್ದು, ಸೆಲ್ಫಿ ಭರಾಟೆ ಕಂಡುಬರುತ್ತಿದೆ.

    ಹಣ ಗಳಿಕೆಯ ಮಾಗೋರ್ಪಾಯವಲ್ಲ

    ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಗ್ರಾಮದ ವಿನಯರಾಮ್​ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. 2018ರಲ್ಲಿ ತಂದೆಯ ನಿಧನದ ನಂತರ ತಾಯಿಯ ಆರೈಕೆಗಾಗಿ ಊರಿಗೆ ಮರಳಿದರು. ಬಳಿಕ ಜೀವನಕ್ಕಾಗಿ ತೀವ್ರ ತೊಂದರೆ ಅನುಭವಿಸಿದರು. ತನ್ನೆಲ್ಲ ಕಷ್ಟ ಮರೆಯಲು ಪುರಾಣ ಗ್ರಂಥ ಓದುತ್ತಿದ್ದರು. ಲಕ್ಷಿ$್ಮ-ನರಸಿಂಹ ಮನೆಯ ದೇವರಾದರೂ ಶಿವನ ಕನಸು ಬೀಳುತ್ತಿತ್ತು. 2022ರ ಶಿವರಾತ್ರಿಯಂದು ಶಿವಪುರಾಣ ಓದುವಾಗ ಶ್ರೀರಾಮನ ಆದರ್ಶ ಪ್ರಸಾರ ಮಾಡುವಂತೆ ಶಿವಪ್ರೇರಣೆ ಆಯಿತಂತೆ. ಹಣಗಳಿಕೆಗಾಗಿ ಈ ಮಾರ್ಗ ಕಂಡುಕೊಂಡಿಲ್ಲ. ರಾಮನ ಆದರ್ಶ ಸಾರುವುದೇ ಉದ್ದೇಶ. ಇವರ ಮಂದಿರದಲ್ಲಿ ಕಾಣಕೆ ಡಬ್ಬಿ ಇಲ್ಲ. ಯಾರಾದರೂ ಹಣ ನೀಡಿದರೆ ಅದನ್ನು ಮಂದಿರ ಸಾಗಾಟಕ್ಕೆ ಹಾಗೂ ಪರಿಕರ ಖರೀದಿಗೆ ಬಳಸುತ್ತಾರೆ.

    ವಯಸ್ಸಾದವರಿಗೆ ಅಯೋಧ್ಯೆಗೆ ಹೋಗಿ ಮಂದಿರ ನೋಡಿ ಬರಲು ಕಷ್ಟವಾಗುತ್ತದೆ. ಹೀಗಾಗಿ ಹಿರಿಯರಿಗೆ ಅನುಕೂಲ ಆಗಲು, ರಾಮನ ಆದರ್ಶ, ಚಿಂತನೆ ಮೈಗೂಡಿಸಿಕೊಳ್ಳಲು ಜನರಿಗೆ ಪ್ರೇರಣೆ ನೀಡಲು ನಿರಂತರ ಪಯಣ ಮಾಡುತ್ತಿದ್ದೇನೆ. ಊಟ&ವಸತಿ ಕೊಟ್ಟರೆ ಸಾಕು. ಎಲ್ಲಿಗಾದರೂ ಮಂದಿರದೊಂದಿಗೆ ಬರುತ್ತೇನೆ.

    (ಮೊ.ಸಂ. 9538257357)

    ವಿನಯರಾಮ್​ ಹಳೇಮನೆ.
    ಬಿದರೆ, ತುಮಕೂರು ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts