More

    ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ಕರಾಚಿ: ಪಾಕಿಸ್ತಾನದ ರಾಷ್ಟ್ರೀಯ ತಂಡದ ವೇಗಿ ಹ್ಯಾರೀಸ್ ರೌಫ್‌ ಜತೆ ಸೆಲ್ಫಿ ತೆಗೆಸಿಕೊಂಡಿರುವ ಅವರ ಅಭಿಮಾನಿ ಯುವಕನೊಬ್ಬ ಇದೇ ಕಾರಣಕ್ಕಾಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾನೆ.

    ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋ ಜತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಸಿಕ್ಕರೆ ಅಂದೇ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಳ್ಳುವವರೇ ಹೆಚ್ಚು. ಅಂಥದರಲ್ಲಿ ಈ ಯುವಕನ ಪಶ್ಚಾತ್ತಾಪ ಪಟ್ಟಿದ್ದೇಕೆ ಎನ್ನುವ ಹಿಂದಿದೆ ಒಂದು ನೋವಿನ ಕಾರಣ.

    ಇದೀಗ ಕೊರಗುತ್ತಿರುವ ಅಭಿಮಾನಿಯ ಹೆಸರು, ಮುಹಮ್ಮದ್ ಶಹಾಬ್ ಘುವಾರಿ. ಕೆಲ ದಿನಗಳ ಹಿಂದೆ ತನ್ನ ನೆಚ್ಚಿನ ಕ್ರಿಕೆಟ್‌ ಹೀರೋ ಜತೆ ಸೆಲ್ಫಿ ತೆಗೆಸಿಕೊಳ್ಳುವ ಅವಕಾಶ ಸಿಕ್ಕಾಗ ಬೀಗಿ ಹೆಮ್ಮೆ ಪಟ್ಟು ಅದನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಗರ್ವದಿಂದ ಶೇರ್‌ ಮಾಡಿಕೊಂಡಿದ್ದ ಅಭಿಮಾನಿ ಇದೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿದ್ದಾರೆ!

    ಇದನ್ನೂ ಓದಿ: ಕೋವಿಡ್‌ಗಾಗಿ ₹3.7 ಲಕ್ಷ ಸಂಗ್ರಹ: ಐದು ವರ್ಷದ ಪುಟಾಣಿಯ ಸಾಹಸ ಇಲ್ಲಿದೆ ನೋಡಿ…

    ಅಷ್ಟಕ್ಕೂ ಇದ್ಯಾಕೆ ಅಂತೀರಾ? ಪಾಕಿಸ್ತಾನದ ತಂಡವು ಇಂಗ್ಲೆಂಡ್‌ನಲ್ಲಿ ಕ್ರಿಕೆಟ್‌ ಆಡಲು ಹೋಗುತ್ತಿದೆ. ಆದರೆ ಅದರಲ್ಲಿ ಹ್ಯಾರೀಸ್ ರೌಫ್‌ ಸೇರಿದಂತೆ ಕೆಲವು ಜನರು ಹೋಗುತ್ತಿಲ್ಲ ಎಂದು ಈ ಯುವಕನಿಗೂ ತಿಳಿದುಬಂದಿದೆ. ಆ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ, ಆಘಾತ ಕಾದಿತ್ತು. ಅದೇನೆಂದರೆ ರೌಫ್‌ ಸೇರಿದಂತೆ ಉಳಿದ ಕ್ರಿಕೆಟಿಗರಿಗೆ ಕರೊನಾ ಪಾಸಿಟಿವ್‌ ಬಂದಿದೆ!

    ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡೆಸಿದ ಪರೀಕ್ಷೆಗಳಲ್ಲಿ ರೌಫ್‌ಗೆ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರವಾಸದ ಮಾಡಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲದೇ ರೌಫ್ ಅವರನ್ನು ಒಟ್ಟು 6 ಬಾರಿ ಪರೀಕ್ಷಿಸಲಾಯಿತು, ಅದರಲ್ಲಿ 5 ಬಾರಿ ಪಾಸಿಟಿವ್‌ ಬಂದಿರುವುದು ದೃಢಪಟ್ಟಿದೆ. ಕ್ರಿಕೆಟ್‌ ತಂಡಕ್ಕೆ ಆಯ್ಕೆ ಆಗುವ ಮಾನದಂಡಗಳ ಅನ್ವಯ ಆಟಗಾರನಿಗೆ ಸತತ ಎರಡು ಬಾರಿ ನೆಗೆಟಿವ್‌ ಬಂದರೆ ಆಡಲು ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಇವರಿಗೆ ಕರೊನಾ ಇನ್ನೂ ಹೋಗಿಲ್ಲ ಎನ್ನುವುದು ದೃಢವಾಗಿದೆ. ಇನ್ನೂಇದನ್ನು ಓದಿ ಈ ಅಭಿಮಾನಿಯ ತಲೆ ತಿರುಗಿ ಹೋಗಿದೆ.

    ರೌಫ್ ಪಾಕಿಸ್ತಾನದ ಕ್ಯಾರೆಂಟೈನ್ ಮಾರ್ಗಸೂಚಿಗಳನ್ನು ಮುರಿದದ್ದರಿಂದ ಕರೊನಾ ಪಾಸಿಟಿವ್‌ ಬಂದಿದ್ದು, ಇದೇ ಸಮಯದಲ್ಲಿ ತನ್ನ ಜತೆ ಸೆಲ್ಫಿ ತೆಗೆದುಕೊಂಡಿರುವುದೂ ತಿಳಿದಿದೆ. ಈ ಬಗ್ಗೆ ಇದೀಗ ಫೇಸ್‌ಬುಕ್‌ ಖಾತೆಯಲ್ಲಿ ಯುವಕ ಅಳಲು ತೋಡಿಕೊಂಡಿದ್ದಾನೆ.

    ಶಾದಾಬ್ ಖಾನ್, ಹೈದರ್ ಅಲಿ, ಫಖರ್ ಜಮಾನ್, ಮೊಹಮ್ಮದ್ ರಿಜ್ವಾನ್, ವಹಾಬ್ ರಿಯಾಜ್, ಇಮ್ರಾನ್ ಖಾನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್ ಮತ್ತು ಕಾಶಿಫ್ ಭಟ್ಟಿ ಅವರು ಪಾಕಿಸ್ತಾನದ ಕೆಲವು ಆಟಗಾರರಾಗಿದ್ದು, ಅವರ ಜತೆ ಹ್ಯಾರೀಸ್‌ಗೂ ಪಾಸಿಟಿವ್‌ ಬಂದಿದೆ. ಇದರಲ್ಲಿ ಕೆಲವರು ಅಂತಿಮವಾಗಿ ನೆಗೆಟಿವ್‌ ಬಂದಿದ್ದ ಕಾರಣ ಆಟಕ್ಕೆ ಅರ್ಹರಾಗಿದ್ದಾರೆ. ಹ್ಯಾರೀಸ್‌ ಮಾತ್ರ ಅರ್ಹರಾಗಿಲ್ಲ ಎಂಬ ಮಾಹಿತಿ ಮುಹಮ್ಮದ್‌ಗೆ ಸಿಕ್ಕಿದೆ! (ಏಜೆನ್ಸೀಸ್‌)
    ಅಯ್ಯೋ... ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ಅಯೋಧ್ಯೆ ಮೇಲೆ ಉಗ್ರರ ಕಣ್ಣು: ಪಾಕ್‌ನಲ್ಲಿ ತರಬೇತಿ! ಗುಪ್ತಚರ ಇಲಾಖೆಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts