More

    ಕೋವಿಡ್‌ಗಾಗಿ ₹3.7 ಲಕ್ಷ ಸಂಗ್ರಹ: ಐದು ವರ್ಷದ ಪುಟಾಣಿಯ ಸಾಹಸ ಇಲ್ಲಿದೆ ನೋಡಿ…

    ಮ್ಯಾಂಚೆಸ್ಟರ್‌: ಲಂಡನ್‌ನಲ್ಲಿರುವ ಐದು ವರ್ಷದ ಬಾಲಕನೊಬ್ಬ ಭಾರತದ ಕರೊನಾ ವೈರಸ್‌ ಪರಿಹಾರ ನಿಧಿಗಾಗಿ 3.7 ಲಕ್ಷ ರೂಪಾಯಿ ಸಂಗ್ರಹ ಮಾಡಿ ಇದೀಗ ಭಾರಿ ಮೆಚ್ಚುಗೆಗೆ ‍ಪಾತ್ರನಾಗಿದ್ದಾನೆ.

    ಬಾಲಕ ಲಂಡನ್‌ ಮ್ಯಾಂಚೆಸ್ಟರ್‌ ನಿವಾಸಿಯಾಗಿರುವ ನಿವಾಸಿಯಾಗಿದ್ದರೂ ತಮಿಳುನಾಡು ಮೂಲದವನು. ಆದ್ದರಿಂದಲೇ ತನ್ನ ತವರು ದೇಶಕ್ಕೆ ಈ ಭಾರಿ ಉಡುಗೊರೆ ನೀಡಿದ್ದಾರೆ. ಅಷ್ಟಕ್ಕೂ ಈ ಪುಟ್ಟ ಬಾಲಕ ಇಂಥದ್ದೊಂದು ಸಾಹಸ ಮಾಡಿರುವುದು ಹೇಗೆ ಅಂತೀರಾ? ಬರೋಬ್ಬರಿ 3,200 ಕಿಮೀ ಸೈಕಲ್‌ನಲ್ಲಿ ಸಂಚರಿಸಿ ಹಣವನ್ನು ಸಂಗ್ರಹ ಮಾಡಿದ್ದಾನೆ.

    ‌ಐದು ವರ್ಷದ ಈ ಪುಟಾಣಿಯ ಹೆಸರು ಅನೀಶ್ವರ್ ಕುಂಚಲಾ ‘ಲಿಟ್ಲ್‌ ಪ್ಯಾಡಲರ್ಸ್ ಅನೀಶ್ ಆಯಂಡ್ ಫ್ರೆಂಡ್ಸ್’ ‌ಹೆಸರಿನಲ್ಲಿ ಮೇ ನಲ್ಲಿ ಸೈಕ್ಲಿಂಗ್ ಪ್ರಾರಂಭಿಸಿದ್ದ ಈ ಬಾಲಕ ತನ್ನ ಜತೆ 60 ಮಂದಿಯನ್ನು ಕರೆದುಕೊಂಡು ಹೋಗಿದ್ದ. ‘ಯುಕೆ ನ್ಯಾಷನಲ್ ಹೆಲ್ತ್ ಸರ್ವೆ’ ಸಹಾಯದೊಂದಿಗೆ ಒಂದು ಕ್ರಿಕೆಟ್ ಟೂರ್ನಿಯನ್ನೂ ಆಯೋಜಿಸಿರುವ ಬಾಲಕ ಅಲ್ಲಿಂದಲೂ ಹಣ ಸಂಗ್ರಹ ಮಾಡಿದ್ದಾನೆ.

    ಇದನ್ನೂ ಓದಿ: ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌

    ಇವನಿಗೆ ಲಂಡನ್‌ನ ‌ಥಾಮಸ್ ಮೂರ್ ಎಂಬ ಶತಾಯುಷಿಯೇ ಸ್ಫೂರ್ತಿ ಅಂತೆ. ಥಾಮಸ್‌ ಅವರು ವಾಕಿಂಗ್ ಸ್ಟಿಕ್ ಹಿಡಿದು ಗಾರ್ಡನ್‌ನಲ್ಲಿ 100 ಸುತ್ತು ನಡೆಯುವ ಮೂಲಕ 317 ಕೋಟಿ ರೂ. ನಿಧಿಯನ್ನು ಸಂಗ್ರಹಿಸಿ ಯುಕೆ ಭ್ರಾತೃತ್ವ ನಿಧಿಗೆ ಕೊಟ್ಟಿದ್ದಾರಂತೆ. ಶತಾಯುಷಿ ಅಜ್ಜನೊಬ್ಬ ಇಷ್ಟೆಲ್ಲಾ ಸಾಧನೆ ಮಾಡಿರುವಾಗ ನಾನೇಕೆ ಮಾಡಬಾರದು ಎಂದು ಎನ್ನಿಸಿತು. ಇದೇ ಕಾರಣಕ್ಕೆ ಈ ಕಾರ್ಯ ಮಾಡಿದ್ದೇನೆ ಎಂದಿದ್ದಾನೆ.

    ತೆಲಂಗಾಣದ ಬ್ರಿಟಿಷ್‌ ಹೈ ಕಮಿಷನರ್, ಆ್ಯಂಡ್ರೂ ಫ್ಲೇಮಿಂಗ್ ಟ್ವಿಟರ್‌ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಬಾಲಕನ‌ ಸಾಹಸಗಾಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ‌ಬಾಲಕನ ತಂದೆ – ತಾಯಿ‌ ಆಂಧ್ರ ಪ್ರದೇಶದ ಚಿತ್ತೂರು ಮೂಲದವರಾಗಿದ್ದು, ಮಗನಿಗೆ ಪ್ರೋತ್ಸಾಹ ನೀಡಿದ್ದಾರೆ.

    ಐದನೇ ಮದುವೆಗೆ ಗಾಳ ಬೀಸುತ್ತಿದ್ದಾಳೆ ಸುಂದರಿ: ಹುಷಾರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts