More

    ಅಮೆರಿಕಕ್ಕೆ ಬರಲಿದೆ ಚೀನಾದ ಡೆಂಜರ್‌ ಬೀಜ: ದೇಶದ ಜನತೆಗೆ ಅಲರ್ಟ್‌

    ವಾಷಿಂಗ್ಟನ್‌: ಅಮೆರಿಕಕ್ಕೆ ಚೀನಾದಿಂದ ಒಂದಿಷ್ಟು ಬೀಜಗಳು ಬರುವ ಸಾಧ್ಯತೆ ಇದ್ದು, ಅವುಗಳನ್ನು ನೆಡದಂತೆ ಸರ್ಕಾರ ಜನರಿಗೆ ಎಚ್ಚರಿಕೆಯನ್ನು ನೀಡಿದೆ.

    ತಾವು ಯಾವುದೇ ಆರ್ಡರ್‌ ಮಾಡಿರದಿದ್ದರೂ ಕೆಲವೊಂದು ಸಸ್ಯಗಳ ‘ಅನಪೇಕ್ಷಿತ’ ಬೀಜಗಳ ಪ್ಯಾಕೆಟ್‌ಗಳನ್ನು ಚೀನಾ ಕಳುಹಿಸಲಿದೆ. ಅದನ್ನು ಯಾರೂ ನೆಡಬಾರದು ಎಂದು ಅಮೆರಿಕದ ಕೃಷಿ ಇಲಾಖೆಯು ಘೋಷಣೆ ಮಾಡಿದೆ.

    ವಾಷಿಂಗ್ಟನ್‌ನಿಂದ ವರ್ಜೀನಿಯಾದವರೆಗೆ ವಿಸ್ತರಿಸಿರುವ ರಾಜ್ಯಗಳಲ್ಲಿ ಈ ಬೀಜಗಳು ಬಂದು ಇಳಿಯಲಿದ್ದು, ಅಲ್ಲಿಯ ಜನತೆಗೆ ಇಲಾಖೆಯಿಂದ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ಈ ಬೀಜಗಳು ಭಾರಿ ಅಪಾಯಕಾರಿಯಾಗಿದ್ದು, ಅವುಗಳನ್ನೇನಾದರೂ ನೆಟ್ಟರೆ ಅದು ಅಮೆರಿಕದ ಮೂಲದ ಎಲ್ಲಾ ಬೆಳೆಗಳನ್ನು ನಾಶಮಾಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಅಲ್ಲಿನ ಜಾನುವಾರಗಳ ಜೀವನಕ್ಕೂ ಅಪಾಯ ಕಟ್ಟಿಟ್ಟಿದೆ ಎಂದು ಎಚ್ಚರಿಕೆ ನೀಡಲಾಗಿದೆ.

    ಇದನ್ನೂ ಓದಿ: ಗರ್ಭದಲ್ಲಿನ ಮಗುವಿಗೂ ಕರೊನಾ: ಪುಣೆಯಲ್ಲೊಂದು ಅಚ್ಚರಿಯ ಕೇಸ್‌

    ಬೀಜಗಳ ಪ್ಯಾಕೆಟ್‌ಗಳ ಕುರಿತು ತನಿಖೆ ಮಾಡಲಾಗುತ್ತಿದೆ. ಇವುಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದು ಪರಿಸರಕ್ಕೆ ಧಕ್ಕೆ ಆಗುತ್ತದೆಯೇ ಅಥವಾ ನಿಜವಾಗಿಯೂ ಇದಕ್ಕೆ ಪರಿಸರದ ಕಾಳಜಿ ಇದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಆನಂತರವಷ್ಟೇ ಈ ಬೀಜಗಳ ಬಗ್ಗೆ ವರದಿ ನೀಡಲಾಗುವುದು. ಅಲ್ಲಿಯವರೆಗೆ ಯಾರೂ ಇದನ್ನು ನೆಡಬಾರದು ಎಂದು ಇಲಾಖೆ ಜನರಿಗೆ ಹೇಳಿದೆ.

    ಕರೊನಾ ವೈರಸ್‌ನಿಂದಾಗಿ ಚೀನಾ ಮತ್ತು ಅಮೆರಿಕದ ನಡುವಿನ ಸಂಬಂಧ ಸಾಕಷ್ಟು ಹದಗೆಟ್ಟಿದೆ. ಚೀನಾದಿಂದ ಯಾವುದೇ ಬೀಜಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಈಗಾಗಲೇ ಸರ್ಕಾರ ಅಂಚೆ ಇಲಾಖೆಗೆ ಸೂಚನೆಯನ್ನೂ ನೀಡಿದೆ. ಆದರೆ ಇದರ ಬೆನ್ನಲ್ಲೇ ಇದೀಗ ಬೀಜಗಳ ಪ್ಯಾಕೆಟ್‌ಗಳ ರಾಶಿ ಬಂದು ಬೀಳುವ ಸಾಧ್ಯತೆಗಳ ಬಗ್ಗೆ ಅಮೆರಿಕ ಮೊದಲೇ ಜನರಿಗೆ ಎಚ್ಚರಿಕೆಯನ್ನು ನೀಡಿದೆ.

    ಇದೊಂದು ಕೃಷಿ ಕಳ್ಳಸಾಗಣೆಯಾಗಿದೆ. ಬಿಳಿ ಅಥವಾ ಲಕೋಟೆಗಳಲ್ಲಿ ವಿವಿಧ ಗಾತ್ರಗಳಲ್ಲಿ ಹಾಗೂ ವಿವಿಧ ಬಣ್ಣಗಳಲ್ಲಿ ಈ ಬೀಜಗಳು ಇರುತ್ತವೆ. ಪ್ಯಾಕೆಟ್‌ಗಳ ಮೇಲೆ ಚೀನೀ ಬರವಣಿಗೆ ಇರುವ ಸಾಧ್ಯತೆ ಇದೆ. ಇಂಥವುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್‌)

    ಅಯೋಧ್ಯೆ ಮೇಲೆ ಉಗ್ರರ ಕಣ್ಣು: ಪಾಕ್‌ನಲ್ಲಿ ತರಬೇತಿ! ಗುಪ್ತಚರ ಇಲಾಖೆಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts