More

    ಗರ್ಭದಲ್ಲಿನ ಮಗುವಿಗೂ ಕರೊನಾ: ಪುಣೆಯಲ್ಲೊಂದು ಅಚ್ಚರಿಯ ಕೇಸ್‌

    ಪುಣೆ: ಕರೊನಾ ವೈರಸ್ ಯಾವ ರೀತಿ, ಹೇಗೆಲ್ಲಾ ಹರಡುತ್ತದೆ ಎನ್ನುವುದನ್ನು ತಿಳಿಯುವುದೇ ಬಲು ಕಷ್ಟದ ವಿಷಯ. ಈ ವೈರಸ್‌ ಹರಡುವಿಕೆ ಕುರಿತಂತೆ ದಿನದಿಂದ ದಿನಕ್ಕೆ ಹೊಸ ಹೊಸ ಕೇಸ್‌ಗಳು ಬರುತ್ತಲೇ ಇವೆ.

    ನವಜಾತ ಶಿಶುವಿಗೆ ಸೋಂಕು ದೃಢಪಟ್ಟಿರುವ ವರದಿ ಕೆಲವು ಆಸ್ಪತ್ರೆಗಳಿಂದ ಬಂದಿದೆ. ಆದರೆ ಇದೀಗ ಸೋಂಕಿತೆಯ ಗರ್ಭದಲ್ಲಿ ಇರುವ ಹುಟ್ಟದ ಮಗುವಿಗೂ ಕರೊನಾ ಬಾಧಿಸಿರುವ ಪ್ರಕರಣ ಪುಣೆಯ ಆಸ್ಪತ್ರೆಯಲ್ಲಿ ನಡೆದಿದೆ.

    ಗರ್ಭದಲ್ಲಿ ಇರುವ ಮಗುವಿಗೆ ಸೋಂಕು ಹರಡಿರುವ ಮೂಲವನ್ನು ಹುಡುಕಿರುವ ವೈದ್ಯರಿಗೆ ತಿಳಿದದ್ದು ಏನೆಂದರೆ ತಾಯಿಯ ಹೊಕ್ಕಳು ಬಳ್ಳಿಯ ಮೂಲಕ ಈ ಸೋಂಕು ಮಗುವಿಗೂ ಹರಡಿದೆ ಎಂದು ಕಂಡುಹಿಡಿದಿದ್ದಾರೆ. ಇದು ಕರೊನಾ ಕೇಸ್‌ನಲ್ಲಿಯೇ ಮೊದಲ ಅಚ್ಚರಿಯ ವಿಷಯ ಎಂದಿದ್ದಾರೆ ಇಲ್ಲಿಯ ವೈದ್ಯರು.

    ಇದನ್ನೂ ಓದಿ: ಅಯೋಧ್ಯೆ ಮೇಲೆ ಉಗ್ರರ ಕಣ್ಣು: ಪಾಕ್‌ನಲ್ಲಿ ತರಬೇತಿ! ಗುಪ್ತಚರ ಇಲಾಖೆಗೆ ಮಾಹಿತಿ


    ತಾಯಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಶಿಶುವು ಗರ್ಭದಲ್ಲಿ ಇರುವಾಗಲೇ ಅಮ್ಮನ ಹೊಕ್ಕಳು ಬಳ್ಳಿಯ ಮೂಲಕ ಅದಕ್ಕೆ ಸೋಂಕು ಹರಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಮಗು ಹುಟ್ಟಿದ ಮೇಲೆ, ತಾಯಿಗೆ ಇನ್ನೂ ಪಾಸಿಟಿವ್‌ ಇದ್ದಲ್ಲಿ, ಸ್ತನ್ಯಪಾನ ಹಾಗೂ ಇತರ ಸಂಪರ್ಕದಿಂದಲೂ ಮಗುವಿಗೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ ವೈದ್ಯರು.

    ಪುಣೆಯ ಸೋಂಕಿತೆಗೆ ಜನಿಸಿದ ಮಗುವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ ಕರೊನಾ ಪಾಸಿಟಿವ್‌ ಬಂದಿತ್ತು. ಆಗ ಈ ಅಧ್ಯಯನ ನಡೆಸಲಾಗಿದೆ ಎಂದು ಆಸ್ಪತ್ರೆಯ ಮಕ್ಕಳ ರೋಗಗಳ ವಿಭಾಗದ ಮುಖ್ಯಸ್ಥೆ ಡಾ.ಆರತಿ ಕಿನಿಕರ್‌ ಹೇಳಿದ್ದಾರೆ.

    ಇದೀಗ ಎರಡು ವಾರಗಳ ಬಳಿಕ ತಾಯಿ-ಮಗು ಇಬ್ಬರೂ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್‌ ಮಾಡಲಾಗಿದೆ ಎಂದಿದ್ದಾರೆ ವೈದ್ಯರು.

    ಸುಂದರಿ ಬಲೆಗೆ ಬಿದ್ದು ಎಲ್ಲ ಕಳೆದುಕೊಂಡ ನಾಲ್ವರು ಗಂಡಂದಿರು- ಹುಷಾರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts