More

    ಅಯೋಧ್ಯೆ ಮೇಲೆ ಉಗ್ರರ ಕಣ್ಣು: ಪಾಕ್‌ನಲ್ಲಿ ತರಬೇತಿ! ಗುಪ್ತಚರ ಇಲಾಖೆಗೆ ಮಾಹಿತಿ

    ನವದೆಹಲಿ: ಇದೇ ಆಗಸ್ಟ್‌ 5ರಂದು ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಡೆಯಲಿರುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ.

    ಇದಿಷ್ಟೇ ಅಲ್ಲದೇ ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಕೂಡ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡುವ ಸಂಚನ್ನು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆ ಕೇಂದ್ರಕ್ಕೆ ಮಾಹಿತಿ ನೀಡಿದೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸ್ ಇಂಟಲಿಜೆನ್ಸ್ ನೆರವಿನೊಂದಿಗೆ ಭಾರತದಲ್ಲಿನ ಧಾರ್ಮಿಕ ಸ್ಥಳಗಳಿಗೆ ದಾಳಿ ಮಾಡಲು ಅಫ್ಗಾನಿಸ್ತಾನದ ಲಷ್ಕರ್-ಎ-ತಯಬಾ ಹಾಗೂ ಜೈಷ್‌-ಎ-ಮೊಹಮ್ಮದ್ ಸಂಘಟನೆಗಳು ದಾಳಿ ನಡೆಸಲು ಸಂಚು ರೂಪಿಸಿವೆ. ಈ ದಾಳಿಗೆ 3ರಿಂದ 5 ಗುಂಪುಗಳಾಗಿ ವಿಂಗಡಿಸಿ ಭಾರತಕ್ಕೆ ಉಗ್ರರನ್ನು ರವಾನಿಸಲಾಗುತ್ತಿದೆ ಎಂದು ಇಲಾಖೆ ವಿವರ ನೀಡಿದೆ.

    ಇದನ್ನೂ ಓದಿ: ಜೀವ ಬೆದರಿಕೆ ಬೆನ್ನಲ್ಲೇ ಜಿಲ್ಲಾಧಿಕಾರಿ ಸಿಂಧೂ ಸೇರಿದಂತೆ 13 ಅಧಿಕಾರಿಗಳ ವರ್ಗ

    ಅತಿ ಗಣ್ಯರನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡುವ ಯೋಜನೆ ರೂಪಿಸಿರುವ ಉಗ್ರರು ಭಾರತದೊಳಗಿನ ಆಂತರಿಕ ದಾಳಿ ಇದು ಎಂಬಂತೆ ಬಿಂಬಿಸಲು ಸಂಚು ರೂಪಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾದುದು ಎಂದು ಅವರು ಹೇಳಿದ್ದಾರೆ.

    ಈ ನಡುವೆಯೇ ಜಮ್ಮು ಕಾಶ್ಮೀರದಲ್ಲಿ ಭಾರೀ ದಾಳಿ ನಡೆಸಲು ಪಾಕಿಸ್ತಾನ 20 ಮಂದಿ ತಾಲಿಬಾನ್ ಉಗ್ರರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗುತ್ತಿರುವ ಮಾಹಿತಿ ಕೂಡ ಗುಪ್ತಚರ ಇಲಾಖೆಗೆ ಸಿಕ್ಕಿದೆ.

    ಜಲಾಲಾಬಾದ್‌ನಲ್ಲಿ ದಾಳಿ ನಡೆಸುವ ತರಬೇತಿಯನ್ನು ಪಾಕಿಸ್ತಾನದ ಸೇನೆಯ ವಿಶೇಷ ಸೇವಾ ಪಡೆ ನೀಡುತ್ತಿದೆ. ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಅಕ್ರಮವಾಗಿ ನುಸುಳಿಸಿ ಕಣಿವೆಯಲ್ಲಿ ಭಾರೀ ವಿಧ್ವಂಸ ಕೃತ್ಯ ನಡೆಸಲು ಈ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿ ಇಲಾಖೆ ನೀಡಿದೆ.

    ಈ ಹಿನ್ನೆಲೆಯಲ್ಲಿ ದೆಹಲಿ, ಅಯೋಧ್ಯೆ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದಕರ ಚಟುವಟಿಕೆಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಈ ಸ್ಥಳಗಳಲ್ಲಿ ಜಾಗರೂಕತೆ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಆದೇಶಿಸಿದೆ.

    ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದೇ ದಿನ ಕಳೆದ ವರ್ಷ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿಯನ್ನು ತೆಗೆದು ಹಾಕಲಾಗಿತ್ತು.

    ಸುಂದರಿ ಬಲೆಗೆ ಬಿದ್ದು ಎಲ್ಲ ಕಳೆದುಕೊಂಡ ನಾಲ್ವರು ಗಂಡಂದಿರು- ಹುಷಾರ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts