More

    ಉಗ್ರ ಹಫೀಜ್ ಸಯೀದ್‌ ಹಸ್ತಾಂತರಿಸುವ ಭಾರತದ ಬೇಡಿಕೆ: ಹೀಗಿದೆ ಕುತಂತ್ರಿ ಪಾಕ್​ ತಕಾರರು…

    ನವದೆಹಲಿ: ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸುವಂತೆ ಭಾರತ ಕೋರಿರುವುದನ್ನು ಪಾಕಿಸ್ತಾನ ದೃಢಪಡಿಸಿದೆ, ಆದರೆ, ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದವಿಲ್ಲ ಎಂದು ಅದು ಹೇಳಿದೆ.

    2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕ ಹಫೀಜ್ ಸಯೀದ್ ಹಲವಾರು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದಾನೆ.

    ಪಾಕಿಸ್ತಾನ ಮೂಲದ ಸಯೀದ್​ನನ್ನು ಹಸ್ತಾಂತರಿಸುವ ಮನವಿಯನ್ನು ಕೆಲವು ದಾಖಲೆಗಳೊಂದಿಗೆ ಇತ್ತೀಚೆಗೆ ಇಸ್ಲಾಮಾಬಾದ್‌ಗೆ ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ಅರಿಂದಮ್ ಬಾಗ್ಚಿ ಅವರು ಶುಕ್ರವಾರ ತಿಳಿಸಿದ್ದರು.

    “ನಾವು ಸಂಬಂಧಿತ ಪೂರಕ ದಾಖಲೆಗಳೊಂದಿಗೆ ವಿನಂತಿಯನ್ನು ಪಾಕಿಸ್ತಾನ ಸರ್ಕಾರಕ್ಕೆ ತಲುಪಿಸಿದ್ದೇವೆ” ಎಂದು ಬಾಗ್ಚಿ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು, ವಿಶ್ವಸಂಸ್ಥೆಯ ನಿಷೇಧಿತ ಭಯೋತ್ಪಾದಕ ಕೂಡ ಈತ ಎಂದು ಹೇಳದ್ದರು.

    ಸಯೀದ್ ಅವರನ್ನು “ಹಣ ಅಕ್ರಮ ವರ್ಗಾವಣೆ ಪ್ರಕರಣ”ದಲ್ಲಿ ಹಸ್ತಾಂತರಿಸುವಂತೆ ಕೋರಿ ಭಾರತೀಯ ಅಧಿಕಾರಿಗಳಿಂದ ಪಾಕಿಸ್ತಾನ ವಿನಂತಿಯನ್ನು ಸ್ವೀಕರಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ ಎಂದು ವಿದೇಶಾಂಗ ಕಚೇರಿಯ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

    ನವದೆಹಲಿಯು ಇಸ್ಲಾಮಾಬಾದ್‌ನೊಂದಿಗೆ ಹಸ್ತಾಂತರ ಒಪ್ಪಂದವನ್ನು ಹೊಂದಿಲ್ಲ. ಆದರೂ, ಹಸ್ತಾಂತರ ಅಸಾಧ್ಯವೇನಲ್ಲ ಎಂದು ಮೂಲಗಳು ಹೇಳಿವೆ. ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಎರಡು ಪ್ರಕರಣಗಳಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಏಪ್ರಿಲ್ 2022 ರಲ್ಲಿ ಸಯೀದ್​ಗೆ 33 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ವ್ಯಕ್ತಿಯೊಬ್ಬ 2023ರಲ್ಲಿ ಆರ್ಡರ್​ ಮಾಡಿದ್ದು 9,940 ಕಾಂಡೋಮ್‌!

    ಭಾರತದ ನಂಬರ್​ 1 ಶ್ರೀಮಂತ ಅಂಬಾನಿಯ ಆಸ್ತಿ ಮೌಲ್ಯ ಎಷ್ಟು? ಜಗತ್ತಿನ ಕುಬೇರ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts