More

    ಪ್ರಾಣ ಪ್ರತಿಷ್ಠಾಪನೆಯ ಅಭಿಯಾನ

    ಕೋಲಾರ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಜ.22ರಂದು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯೆ ರಾಮ ತೀರ್ಥಕ್ಷೇತ್ರ ಟ್ರಸ್ಟ್​ ವತಿಯಿಂದ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್​ನ ಕೋಲಾರ ವಿಭಾಗದ ಕಾರ್ಯದರ್ಶಿ ಗೌರಿಶಂಕರ್​ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಮಾರು ಐದು ನೂರು ವರ್ಷಗಳ ಸತತ ಹೋರಾಟದ ಲಗಾಗಿ ಸುಪ್ರೀಂಕೋರ್ಟ್​ ಆದೇಶದಂತೆ ರಾಮ ಜನ್ಮಭೂಮಿ ದೊರೆತಿದ್ದು, ಭಕ್ತರು ಸಮರ್ಪಣೆ ಮಾಡಿದ ಹಣದಿಂದಲೇ ಶ್ರೀರಾಮ ಮಂದಿರ ನಿಮಾರ್ಣವಾಗಿದೆ ಎಂದರು.

    ಮಂದಿರ ಸ್ಥಾಪನೆಗೆ ಮುನ್ನ ದೇಶದಲ್ಲಿನ ಗ್ರಾಮ ಗ್ರಾಮಗಳಲ್ಲಿರುವ ಪ್ರತಿ ಹಿಂದೂ ಮನೆಗೆ ರಾಮನ ಪ್ರಸಾದ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಹಿಂದುಪರ ಸಂಘಟನೆಗಳು ಮತ್ತು ಶ್ರೀ ರಾಮ ಭಕ್ತರನ್ನು ಜೋಡಿಸಿಕೊಂಡು ಅಯೋಧ್ಯೆಯಿಂದ ಬಂದಿರುವ ರಾಮಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು ತಲುಪಿಸುವ ಯೋಜನೆ ರೂಪಿಸಲಾಗಿದೆ ಎಂದರು.

    ವಿಶ್ವ ಹಿಂದು ಪರಿಷತ್​ ಅಭಿಯಾನದ ವಿಭಾಗ ಸಂಯೋಜಕ ಸಿದ್ದಲಿಂಗೇಶ್ವರ ಮಾತನಾಡಿ, ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದ ಜಿಲ್ಲೆಗಳಲ್ಲಿ ಜನವರಿ 1ರಿಂದ 15ರತನಕ, 9,57,800 ಮನೆಗಳಿಗೆ ರಾಮಮಂದಿರದ ಭಾವಚಿತ್ರ ಮತ್ತು ನಿವೇದನಾ ಪತ್ರಗಳನ್ನು 38 ಲಕ್ಷ ಮಂದಿಗೆ ತಲುಪಿಸುವ ಗುರಿ ಹೊಂದಲಾಗಿದೆ ಎಂದರು. ಜ.22ರಂದು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ಆಗುವ ಸಮಯದಲ್ಲಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಶ್ರೀರಾಮ ಮಂದಿರಗಳಲ್ಲಿ ವಿಶೇಷ ಸತ್ಸಂಗ, ಭಜನೆಗಳು ನಡೆಯಲಿವೆ. ಪ್ರತಿಷ್ಠೆಯ ನೇರ ಪ್ರಸಾರ ಪ್ರದೇಶನದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ವಿಶ್ವ ಹಿಂದು ಪರಿಷದ್​ ಜಿಲ್ಲಾಧ್ಯಕ್ಷ ಡಾ.ಶಿವಣ್ಣ, ಅಭಿಯಾನದ ಸಂಚಾಲಕ ಗೋವಿಂದರಾಜು, ಬಾಬು, ಜಗದೀಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts