ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ಪೊಲೀಸರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: 2025 ರ ಬಿಗ್ ಬಾಸ್ ಸೀಸನ್ 9; ಸಾಮಾನ್ಯರಿಗೂ ಅವಕಾಶ; 1 ಲಕ್ಷಕ್ಕೂ ಹೆಚ್ಚು ಸ್ಪರ್ಧಿಗಳಿಂದ ಅರ್ಜಿ ಸಲ್ಲಿಕೆ| bigg-boss
ಬೆಳಗಾವಿ ಜಿಲ್ಲೆಯ ಗೋಕಾಕ್ನ ಲಕ್ಷ್ಮೀದೇವಿ ಜಾತ್ರೆಯಲ್ಲಿ ಬೆಂಬಲಿಗರೊಂದಿಗೆ ಭಾಗವಹಿಸಿದ ಅವರು, ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಅವರ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಜಾತ್ರೆಯಲ್ಲಿ ನೂರಾರು ಜನರ ನಡುವೆ ಹಾಗೂ ಪೊಲೀಸರ ಸಮ್ಮುಖದಲ್ಲೇ ಫೈರಿಂಗ್ ಮಾಡಲಾಗಿದೆ.
Police have registered a suo motu case under Arms Act against #SantoshJarkiholi, son of #BJP MLA #RameshJarkiholi, for opening fire in the air during the annual fair of Laxmi temple in #Gokak on July 5.
Santosh, covered in yellow vermilion, was standing in the crowd in the fair. pic.twitter.com/Iv0vKt4l1l
— Hate Detector 🔍 (@HateDetectors) July 5, 2025
ಇನ್ನೂ ಈ ಸಂಬಂಧ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ಜಾರಕಿಹೊಳಿ ವಿರುದ್ಧ ಗೋಕಾಕ್ ಶಹರ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಹೃದಯ ಸ್ತಂಭನದ ಆರಂಭಿಕ 5 ಲಕ್ಷಣಗಳಾವುವು? ಹೃದಯಾಘಾತವಾದಾಗ ಮೊದಲು ಏನು ಮಾಡಬೇಕು? heart-attack