2025 ರ ಬಿಗ್ ಬಾಸ್ ಸೀಸನ್​ 9; ಸಾಮಾನ್ಯರಿಗೂ ಅವಕಾಶ; 1 ಲಕ್ಷಕ್ಕೂ ಹೆಚ್ಚು ಸ್ಪರ್ಧಿಗಳಿಂದ ಅರ್ಜಿ ಸಲ್ಲಿಕೆ| bigg-boss

blank

ಹೈದರಾಬಾದ್: ಬಿಗ್ ಬಾಸ್ ತೆಲುಗು ಸೀಸನ್​ 9 ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಸೀಸನ್ ಬಗ್ಗೆ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ನಿರೂಪಕ ನಾಗಾರ್ಜುನ ಅವರ ಮಾತುಕತೆ ಪ್ರತಿ ಸೀಸನ್ ಆರಂಭದಿಂದ ಕೊನೆಯವರೆಗೆ ವೀಕ್ಷಕರನ್ನು ಆಕರ್ಷಿಸಿದೆ. ಸೀಸನ್ 3 ರಿಂದ ಕಾರ್ಯಕ್ರಮವನ್ನು ಭಾರಿ ಹಿಟ್ ಮಾಡುವಲ್ಲಿ ನಾಗಾರ್ಜುನ ಅವರು ಬಹು ದೊಡ್ಡ ಪಾತ್ರವನ್ನು ವಹಿಸಿದ್ದಾರೆ.

ಇದನ್ನೂ ಓದಿ: ಹೃದಯ ಸ್ತಂಭನದ ಆರಂಭಿಕ 5 ಲಕ್ಷಣಗಳಾವುವು? ಹೃದಯಾಘಾತವಾದಾಗ ಮೊದಲು ಏನು ಮಾಡಬೇಕು? heart-attack

ನಾನಾ ಗದ್ದಲದ ಬಳಿಕ ಬಿಗ್ ಬಾಸ್ ತೆಲುಗು ಸೀಸನ್ 9 ಸೆಪ್ಟೆಂಬರ್ 7, 2025 ರಂದು ಸ್ಟಾರ್ ಮಾದಲ್ಲಿ ಅಧಿಕೃತವಾಗಿ ಪ್ರದರ್ಶನಗೊಳ್ಳಲಿದೆ. ಆದರೆ ಈ ಬಾರಿ, ಅಭಿಮಾನಿಗಳನ್ನು ಇನ್ನಷ್ಟು ಉತ್ಸುಕರನ್ನಾಗಿಸುವ ಒಂದು ತಿರುವು ಇದೆ. ಅಧಿಕೃತವಾಗಿ ಬಿಗ್ ಬಾಸ್ ಆರಂಭದ ಕುರಿತು ಸುದ್ದಿ ಹೊರಬಿದ್ದಿದ್ದು, ಈ ಮೂಲಕ ವೀಕ್ಷಕರಿಗೆ ಆಯೋಜಕರು ಸರ್ಪ್ರೈಸ್ ನೀಡಿದ್ದಾರೆ. ಈ ಬಾರಿಯ ಬಿಗ್​ಬಾಸ್​ಗೆ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರು ಸಹ ಮನೆಗೆ ಪ್ರವೇಶ ಮಾಡಲಿದ್ದಾರೆ.

ತೆಲುಗು ಬಿಗ್ ಬಾಸ್ ಸೀಸನ್-9ಗೆ ಸಾಮಾನ್ಯ ಜನರು ಸ್ಪರ್ಧಿಯಾಗಬೇಕೆಂದರೆ, ಮೊದಲು www.bb9.jiostar.com ವೆಬ್‌ಸೈಟ್‌ಗೆ ಲಾಗಿನ್ ಆಗಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ ನಂತರ ಯಾಕೆ ಬಿಗ್ ಬಾಸ್‌ನಲ್ಲಿ ಭಾಗಿಯಾಗಬೇಕೆಂದು ಕಾರಣವನ್ನು ಹೇಳುವ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ಹೀಗೆ ಸಾಮಾನ್ಯರು ಕಳುಹಿಸಿದ ವಿಡಿಯೋದಲ್ಲಿ ಆಯ್ದ ಮಂದಿಯನ್ನು ಬಿಗ್‌ಬಾಸ್ ಮನೆಗೆ ಕಳುಹಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಹಳದಿ ಮಾರ್ಗಕ್ಕೆ ಆ.15 ರೊಳಗೆ ಚಾಲನೆ| namma-metro

ಜುಲೈ 8ರವರೆಗೆ ‘ಬಿಗ್ ಬಾಸ್ ತೆಲುಗು -9’ನ ಸ್ಪರ್ಧಿಯಾಗಿ ಭಾಗಿಯಾಗುವ ನಿಟ್ಟಿನಲ್ಲಿ ರಿಜಿಸ್ಟ್ರೇಷನ್ಸ್ ಮಾಡುವ ಅವಕಾಶವಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ರಿಜಿಸ್ಟ್ರೇಷನ್ಸ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಹೇಗೆ ಆಯ್ಕೆ ಮಾಡುತ್ತಾರೆ?

1. ಆರಂಭಿಕ ಸ್ಕ್ರೀನಿಂಗ್: ಲಕ್ಷಾಂತರ ಅರ್ಜಿಗಳಲ್ಲಿ, 200 ಅಭ್ಯರ್ಥಿಗಳನ್ನು ಅವರ ವೀಡಿಯೊಗಳು, ವ್ಯಕ್ತಿತ್ವ ಮತ್ತು ನಟನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
2. ದೂರವಾಣಿ ಸಂದರ್ಶನ: 100 ಜನರಿಗೆ ಮುಂದಿನ ಸುತ್ತಿಗೆ ಕರೆ ಬರುತ್ತದೆ.
3. ಗುಂಪು ಚರ್ಚಾ ಸುತ್ತು: ಗುಂಪು ಕಾರ್ಯದ ನಂತರ ಈ 100 ಅಭ್ಯರ್ಥಿಗಳನ್ನು 40 ಅಭ್ಯರ್ಥಿಗಳಿಗೆ ಫಿಲ್ಟರ್ ಮಾಡಲಾಗುತ್ತದೆ.
4. ವ್ಯಕ್ತಿಗತ ಸಂದರ್ಶನ: ಜಡ್ಜ್​ಗಳು ಮತ್ತು ಮಾಜಿ ಸ್ಪರ್ಧಿಗಳು ಸಹ 40 ಜನರನ್ನು ಸಂದರ್ಶಿಸಿ, 15 ಜನರನ್ನು ಆಯ್ಕೆ ಮಾಡುತ್ತಾರೆ.
5. ಸಾರ್ವಜನಿಕ ಮತದಾನ: ಅಧಿಕೃತವಾಗಿ ಮನೆಗೆ ಪ್ರವೇಶಿಸುವ ಟಾಪ್ 3 ಸಾಮಾನ್ಯರನ್ನು ಆಯ್ಕೆ ಮಾಡಲು ಸಾರ್ವಜನಿಕರು ಮತ ಚಲಾಯಿಸುತ್ತಾರೆ.
(ಏಜೆನ್ಸೀಸ್)

1 ಲಕ್ಷ ಕೋಟಿ ರೂ.ಮೌಲ್ಯದ ಕ್ಷಿಪಣಿ, ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ| Weapons Purchases

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…