ಬೆಂಗಳೂರು: ರಾಜ್ಯ ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಆಗಸ್ಟ್ 15ರ ಒಳಗಾಗಿ ಹಳದಿ ಮಾರ್ಗಕ್ಕೆ ಚಾಲನೆ ನೀಡಲಾಗುವುದು ಎಂದು ಬಿಎಂಆರ್‌ಸಿಎಲ್ ಎಂಡಿ ಮಹೇಶ್ವರ್ ರಾವ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ಜತೆ ಸಂಬಂಧ! ಪತಿ-ಮಕ್ಕಳು ಬಿಟ್ಟು ಹೋಗಲು ಸಿದ್ಧ: ಕೊನೆಗೂ ಗಂಡ ಮಾಡಿದ್ದೇನು? | Relationship
ಇನ್ನೂ ಹಳದಿ ಮಾರ್ಗದ ಬಗ್ಗೆ ಮಾತನಾಡಿದ ಮಹೇಶ್ವರ್ ರಾವ್, ನಮಗೆ ಎರಡು ಮನವಿ ಬಂದಿದೆ, ಹಳದಿ ಮಾರ್ಗ ಆರಂಭ ಮಾಡೋಕೆ ಈಗಾಗಲೇ ಮೂರು ಕೋಚ್ ಬಂದಿದೆ. ಎಲ್ಲಾ ರೆಗ್ಯುಲಾರಿಟೀಸ್ ಒಂದು ತಿಂಗಳ ಒಳಗೆ ಆಗಬಹುದು ಎಂದು ಹೇಳಿದ್ದಾರೆ.
ನಾವು ಆಗಸ್ಟ್ ತಿಂಗಳಲ್ಲಿ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಚಾಲನೆ ಕೊಡ್ತೀವಿ. ಜಯನಗರದಲ್ಲಿ ಅಂಡರ್ ಪಾಸ್‌ಗೆ ಮನವಿ ಕೊಟ್ಟಿದ್ದಾರೆ. ಸರ್ಕಾರ ಫಂಡಿಂಗ್ ಕೊಡುತ್ತಾ ಅಥವಾ ಇಲ್ಲವಾ ಅನ್ನುವ ಬಗ್ಗೆ ನೋಡ್ಬೇಕು ಎಂದಿದ್ದಾರೆ.
ಇದನ್ನೂ ಓದಿ: 1 ಲಕ್ಷ ಕೋಟಿ ರೂ.ಮೌಲ್ಯದ ಕ್ಷಿಪಣಿ, ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ| Weapons Purchases
ಸೇಫ್ಟಿ ಟೆಸ್ಟ್ ಏಜೆನ್ಸಿ ಇದೆ, ಅವರು ಕೂಡ ಎಲ್ಲಾ ಚೆಕ್ ಮಾಡ್ತಾರೆ. ಮುಂದಿನ ವಾರದ ಒಳಗೆ ಸೇಫ್ಟಿ ಅಸೆಸ್ಮೆಂಟ್ ಟೆಸ್ಟ್ ಮುಗಿಯುವ ಸಾಧ್ಯತೆ ಇದೆ. 17 ಕಿ.ಮೀನಲ್ಲಿ 17 ಸ್ಟೇಷನ್ ಇದೆ. ನಾವು ಸರ್ಕಾರದ ಮುಂದೆ ಹೋಗ್ತೇವೆ. ಎಲ್ಲಾ ಮಾಡೋದ ಅಥವಾ ಮೂರ್ನಾಲ್ಕು ಸ್ಟೇಷನ್‌ನಲ್ಲಿ ಮಾತ್ರ ಓಡ್ಸೋದಾ ನೋಡ್ತೀವಿ ಎಂದು ಹೇಳಿದ್ದಾರೆ.
(ಏಜೆನ್ಸೀಸ್)
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ; ಟ್ರಂಪ್ ಮಾತಿಗೆ ಪ್ರಧಾನಿ ಮೋದಿ ತಲೆಬಾಗುತ್ತಾರೆ; ರಾಹುಲ್ ಗಾಂಧಿ| rahul-gandhi