More

    ‘ಸಿಡಿ ಲೇಡಿ’ ಹೆಸರಲ್ಲಿ ರಿಜಿಸ್ಟರ್ ಆಯ್ತು ಸಿನಿಮಾ ಟೈಟಲ್! ಸ್ಯಾಂಡಲ್​ವುಡ್​ನಲ್ಲಿ ವಿವಾದ ಎಬ್ಬಿಸಲಿದ್ಯಾ?

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ ಮಾಜಿ ಸಚಿವರೊಬ್ಬರದ್ದು ಎನ್ನಲಾದ ಸೆಕ್ಸ್​ ಸಿಡಿ ಪ್ರಕರಣ. ಈಗ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಆಗ್ತಿದೆ ಈ ಪ್ರಕರಣ!

    ಕನ್ನಡ ಫಿಲ್ಮ್ ಚೇಂಬರ್​ನಲ್ಲಿ ‘ಸಿಡಿ ಲೇಡಿ’ ಸಿನಿಮಾ ಟೈಟಲ್​ ರಿಜಿಸ್ಟರ್ ಆಗಿದೆ. ನಿರ್ಮಾಪಕ ಸಂದೇಶ್ ನಾಗಾರಾಜ್ ಬ್ಯಾನರ್​ನಲ್ಲಿ ಈ ಹೆಸರು ನೋಂದಣಿ ಆಗಿದ್ದು, ಸಿಡಿ ಪ್ರಕರಣ ಸಿನಿಮಾ ಆಗ್ತಿದೆ ಎಂಬ ಮಾಹಿತಿ ಲಭ್ಯ ಆಗಿದೆ. ಮತ್ತೊಂದು ವಿವಾದ ಎಬ್ಬಿಸುತ್ತಾ? ಈ ಸಿಡಿ ಲೇಡಿ ಟೈಟಲ್​ ಎಂಬ ಪ್ರಶ್ನೆ ಕೂಡ ಎದ್ದಿದೆ. ಇದನ್ನೂ ಓದಿರಿ ಎರಡು ಮಕ್ಕಳ ತಾಯಿ ಆತ್ಮಹತ್ಯೆ! ಇಂಥ ನೀಚ ಕೆಲಸಕ್ಕೆ ಇಳಿದನಾ ಗಂಡ?

    ಈ ಹಿಂದೆ ‘ಮುಖ್ಯಮಂತ್ರಿ ಐ ಲವ್ ಯು’ ಸಿನಿಮಾ ಟೈಟಲ್ ಕೂಡ ನೋಂದಣಿ ಆಗಿತ್ತು. ಈ ಟೈಟಲ್​ ವಿವಾದಕ್ಕೆ ಗುರಿಯಾಗಿತ್ತು. ಎಟಿಎಂನಲ್ಲಿ ಹಲ್ಲೆ ಆಗಿದ್ದ ಪ್ರಕರಣಕ್ಕೂ ಸಿನಿಮಾ ಟಚ್​ ಕೊಟ್ಟಿದ್ದನ್ನು ಸ್ಮರಿಸಬಹುದು.

    ಮಾ.2ರಂದು ಜಾರಕಿಹೊಳಿಯದ್ದು ಎನ್ನಲಾದ ಸಿಡಿ ವೈರಲ್​ ಆಗುತ್ತಿದ್ದಂತೆ ರಾಜ್ಯದಲ್ಲಿ ಭಾರಿ ಗದ್ದಲ ಎದ್ದಿತ್ತ. ಮರುದಿನವೇ ನೈತಿಕಹೊಣೆ ಹೊತ್ತು ರಮೇಶ್​ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೂರುದಾರ ದಿನೇಶ್​ ಕಲ್ಲಹಳ್ಳಿ ದೂರು ಹಿಂಪಡೆಗೆ ನಿರ್ಧರಿಸುತ್ತಿದ್ದಂತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಮೇಶ್​ ಜಾರಕಿಹೊಳಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಇದು ನಕಲಿ ಸಿಡಿ ಎಂದು ದೂರು ದಾಖಲಿಸಿದ್ದರು. ಇಷ್ಟೆಲ್ಲ ಅವಾಂತರದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ವಿಡಿಯೋದಲ್ಲಿ ಕಾಣಿಸಿಕೊಂಡ ಸಿಡಿ ಕೇಸ್​ನ ಯುವತಿ, ರಮೇಶ್ ಜಾರಕಿಹೊಳಿ ಅವರು ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ನನ್ನ ಮಾನ ಮರ್ಯಾದೆ ಊರು ತುಂಬಾ ಹರಾಜಾಗಿದೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು ಎಂದು ಕೇಳಿಕೊಂಡಿದ್ದಳು. ಆದರೆ ಸಿಡಿ ಲೇಡಿ ಆಗಲಿ, ಸಿಡಿ ಕಿಂಗ್​ಪಿನ್​, ಹ್ಯಾಕರ್ಸ್​ ಆಗಲಿ ಯಾರೊಬ್ಬರೂ ಇನ್ನೂ ಎಸ್​ಐಟಿ ವಿಚಾರಣೆಗೆ ಹಾಜರಾಗಿಲ್ಲ. ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಿನಕ್ಕೊಂದು ಟ್ವಿಸ್ಟ್​ ಪಡೆಯುತ್ತಿರುವ ಈ ಸಿಡಿ ಕೇಸ್​ ಇದೀಗ ‘ಸಿಡಿ ಲೇಡಿ’ ಸಿನಿಮಾ ಟೈಟಲ್​ ರಿಜಿಸ್ಟ್ರಾರ್​ ಆಗಿದೆ. ಇದರ ಬೆನ್ನಲ್ಲೇ ಸಿಡಿ ಕೇಸ್​ ಸಿನಿಮಾ ಬರುತ್ತಾ? ನಟ-ನಟಿ ಯಾರು? ಯಾವಾಗ ರಿಲೀಸ್​ ಆಗುತ್ತೆ…? ಎಂಬ ಚರ್ಚೆ ಸಾರ್ವಜನಿಕ ವಯಲದಲ್ಲಿ ಶುರುವಾಗಿದೆ.

    ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

    ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

    ರಮೇಶ್​ ಜಾರಕಿಹೊಳಿ ಮನೆಗೆ ಇಂದ್ರಜಿತ್​ ಲಂಕೇಶ್​ ಬಂದಿದ್ದೇಕೆ?

    ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts