ಬಂಧಿಸಲು ಬಂದ ಪೊಲೀಸರು ನನ್ನೊಂದಿಗೆ ಮದ್ಯ ಸೇವಿಸಿದ್ರು; ನಿರ್ದೇಶಕ ರಾಮ್​ ಗೋಪಾಲ್​ವರ್ಮಾ ವಿವಾದಾತ್ಮಕ ಹೇಳಿಕೆ | Ram Gopal Varma

Untitled design - 2025-03-31T145830.418
Published on

ಹೈದರಾಬಾದ್​​: ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಯಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್​ಗಳನ್ನು ಮಾಡುವುದರಿಂದ ಅವರ ವಿರುದ್ಧ ಹಲವು ಬಾರಿ ಪ್ರಕರಣಗಳು ದಾಖಲಾಗಿವೆ. ಸಂದರ್ಶನವೊಂದರಲ್ಲಿ ಅರೆಸ್ಟ್​ ಮಾಡಲು ಬಂದಿದ್ದ ಪೊಲೀಸರೆ ತಮ್ಮ ಜತೆ ಕುಳಿತು ಮದ್ಯ ಸೇವನೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ.

4-5 ವರ್ಷಗಳ ಹಿಂದೆ ನಾನು ಕೆಲವು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದೆ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ, ನನಗೆ ಏನು ಅನ್ನಿಸಿತೊ ಅದನ್ನು ಬರೆದೆ ಕೆಲವು ಗಂಟೆಗಳ ನಂತರ ಮಹೇಶ್ ಭಟ್ ಸರ್ ನನಗೆ ಕರೆ ಮಾಡಿ, ರಾಮು, ನಿಮ್ಮ ಟ್ವೀಟ್ ಬಗ್ಗೆ ಗದ್ದಲವಿದೆ, ಆದರೆ ಧರ್ಮನಿಂದನೆ ಮಾಡುವುದು ಕಾನೂನಿಗೆ ವಿರುದ್ಧವಲ್ಲ ಎಂದು ಅರ್ಥಮಾಡಿಕೊಳ್ಳಿ ಎಂದು ಹೇಳಿದರು. ನಿಜ ಹೇಳಬೇಕೆಂದರೆ ನಾನು ಏನು ಟ್ವೀಟ್​ ಮಾಡಿದ್ದೆ ಎಂಬುದನ್ನು ಮರೆತಿದ್ದರಿಂದ ಅವರು ಏನು ಮಾತನಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಈ ವಿಷಯದಲ್ಲಿ ನನ್ನ ವಿರುದ್ಧ ಸುಮಾರು 6-7 ಪ್ರಕರಣಗಳು ದಾಖಲಾಗಿವೆ. ನಾವು ಎಲ್ಲಾ 6-7 ಪ್ರಕರಣಗಳನ್ನು ಒಂದೇ ಸ್ಥಳದಲ್ಲಿ ತರಲು ಪ್ರಯತ್ನಿಸುತ್ತಿದ್ದೆವು, ಆದರೆ ಅಷ್ಟೊತ್ತಿಗೆ ಪೊಲೀಸರು ನನ್ನ ಕಚೇರಿಯನ್ನು ತಲುಪಿದರು. ಏತನ್ಮಧ್ಯೆ ನ್ಯಾಯಾಲಯವು ಆ ಕಾನೂನನ್ನು ರದ್ದುಗೊಳಿಸಿತ್ತು. ಆಗ ಪೊಲೀಸರಿಗೆ ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಆದ್ದರಿಂದ ಅವರೆಲ್ಲರೂ ನನ್ನೊಂದಿಗೆ ಕುಳಿತು ಮದ್ಯ ಸೇವಿಸಿ ನಂತರ ಹೊರಟುಹೋದರು ಎಂದು ವಿವರಿಸಿದರು.

ಅಲ್ಲದೆ ನನ್ನ ಹೆಚ್ಚಿನ ಟ್ವೀಟ್‌ಗಳಿಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ. ನಾನು ಏನೇ ಟ್ವೀಟ್ ಮಾಡಿದರೂ ಅದು ಹೆಚ್ಚಾಗಿ ಅಜ್ಞಾನದಿಂದಾಗಿ, ಆದರೆ ಕೆಲವೊಮ್ಮೆ ನಾನು ಯಾರನ್ನಾದರೂ ಕೀಟಲೆ ಮಾಡಲು ಅಥವಾ ಕಿರುಕುಳ ನೀಡಲು ಸಹ ಇಂತಹ ಟ್ವೀಟ್​ ಮಾಡುತ್ತೇನೆ ಎಂದು ಒಪ್ಪಿಕೊಂಡರು.

ಇನ್ನು ತಾವು ಮಾಡುವ ಟ್ವೀಟ್​ನಿಂದ ತಮ್ಮನ್ನು ಟ್ರೋಲಿಂಗ್ ಮಾಡುತ್ತಿದ್ದ ಕುರಿತು ಮಾತನಾಡಿದ ಅವರು, ನಾನು ಈ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ನಾನು ಏನನ್ನಾದರೂ ಪೋಸ್ಟ್ ಮಾಡಿದ ನಂತರ ಜನರು ಅದರ ಬಗ್ಗೆ ಏನು ಹೇಳುತ್ತಿದ್ದಾರೆಂದು ನೋಡಲು ನಾನು ಅಪರೂಪಕ್ಕೆ ಮತ್ತೊಮ್ಮೆ ಪರಿಶೀಲಿಸುತ್ತೇನೆ. ನಾನು ಕಾಮೆಂಟ್‌ಗಳನ್ನು ಎಂದಿಗೂ ಓದಿಲ್ಲ. ನಾನು ಏನು ಹೇಳಬೇಕೋ ಅದನ್ನು ನಾನು ಹೇಳಿದ್ದೇನೆ ಎಂದಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net