ಮುಂಬೈ: ಚಿತ್ರರಂಗದಲ್ಲೂ ಸ್ವಜನಪಕ್ಷಪಾತವಿದ್ದು ಇದರಿಂದಾಗಿಯೇ ಹಲವು ಅವಕಾಶಗಳನ್ನು ಕಳೆದುಕೊಂಡೆ ಎಂದು ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಬಹುಕೋಟಿ ಸ್ಟಾಕ್ ಟ್ರೇಡಿಂಗ್ ಹಗರಣ.. ಅಸ್ಸಾಮಿ ನಟಿ ಸುಮಿ ಬೋರಾ ಅರೆಸ್ಟ್!
ಚಿತ್ರರಂಗದಲ್ಲಿ ಸಿನಿಮಾ ಕುಟುಂಬಕ್ಕೆ ಸೇರಿದವರಿಗೆ ಅಥವಾ ತಮಗೆ ತೀರ ಬೇಕಾದವರಿಗೆ ಮಾತ್ರವೇ ಅವಕಾಶ ನೀಡುವುದು ಇಂದು ನಿನ್ನೆಯದಲ್ಲ. ಆದರೆ ಇದರಿಂದ ಪ್ರತಿಭಾವಂತರು ತೆರೆ ಮರೆಗೆ ಸರಿಯಬೇಕಾಗುತ್ತದೆ. ನಾನು, ನನ್ನ ಬಳಿಕ ನನ್ನ ಮಕ್ಕಳು ಮೆರೆಯಬೇಕು ಎಂಬ ಮನೋಭಾವ ಬದಲಾಗಬೇಕು. ಇದಕ್ಕಾಗಿ ಅದೆಷ್ಟೋ ಸ್ವಾರ್ಥಿಗಳು ಪ್ರತಿಭಾವಂತರ ಕೈಯಿಂದ ಅವಕಾಶಗಳನ್ನು ಕಿತ್ತುಕೊಂಡಿರುವುದಿದೆ ಎಂದು ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸ್ವಜನಪಕ್ಷಪಾತದಿಂದ ತಾನು ಎದುರಿಸಿದ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
ಸ್ವಜನ ಪಕ್ಷಪಾತದಿಂದ ನಾನು ಸಮಸ್ಯೆ ಅನುಭವಿಸಿದ್ದೇನೆ. ಕೆಲವು ಸಿನಿಮಾಗಳು ನನ್ನ ಕೈತಪ್ಪಿವೆ. ಆದರೆ ಅದನ್ನೇ ಕಾರಣ ಮಾಡಿಕೊಂಡು ದ್ವೇಷ ಸಾಧಿಸಿಕೊಂಡು ಕೂರುವ ವ್ಯಕ್ತಿ ನಾನಲ್ಲ. ನಮ್ಮ ತಂದೆ ಸೈನ್ಯದಲ್ಲಿದ್ದವರು, ನಾನು ಒಂದೊಮ್ಮೆ ಸೈನ್ಯಕ್ಕೆ ಸೇರುವ ನಿರ್ಧಾರ ಮಾಡಿದ್ದಿದ್ದರೆ ಅವರು ನನಗೆ ಸಹಾಯ ಮಾಡುತ್ತಿದ್ದರು, ಸಲಹೆ ಕೊಡುತ್ತಿದ್ದರು, ಅದನ್ನು ತಪ್ಪು ಎಂದು ಹೇಳಲಾಗದು ಎಂದು ರಕುಲ್ ಪ್ರೀತ್ ಸಿಂಗ್ ಭಿನ್ನ ಹೇಳಿಕೆ ನೀಡಿದ್ದಾರೆ.
ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್ ಬಳಿಕ ತೆಲುಗಿನ ಸ್ಟಾರ್ ನಟಿಯಾಗಿ ಬೆಳೆದರು. ತೆಲುಗಿನ ಬಹುತೇಕ ಎಲ್ಲ ಸ್ಟಾರ್ ನಟರೊಟ್ಟಿಗೂ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಲ್ಲದೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮಿಳಿನಲ್ಲಿಯೂ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದರು. ನಂತರ ದಕ್ಷಿಣದಿಂದ ದೂರವಾಗಿ ಬಾಲಿವುಡ್ನಲ್ಲಿ ಹಲವಾರು ಸಿನಿಮಾಗಳಲ್ಲಿ ರಕುಲ್ ನಟಿಸಿದ್ದಾರೆ.
ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್.. ಕೇಂದ್ರದ ಅಭಿಪ್ರಾಯ ಕೇಳಿದ ಮದ್ರಾಸ್ ಹೈಕೋರ್ಟ್