More

  ಅಶ್ಲೀಲ ವಿಡಿಯೋ ಪೋಸ್ಟ್​ ಮಾಡಿದ ಪ್ರಕರಣ: ರಾಖಿ ಸಾವಂತ್​ಗೆ ನಿರೀಕ್ಷಣಾ ಜಾಮೀನು ನಿರಾಕರರಣೆ!

  ಮುಂಬೈ: ರಾಖಿ ಸಾವಂತ್‌ಗೆ ಮುಂಬೈ ನ್ಯಾಯಾಲಯವುನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಆಕೆಯ ಮಾಜಿ ಪತಿ ಅನಿಲ್ ದುರಾನಿ ಆಕೆ ವಿರುದ್ಧ ಮೊಕದ್ದಮೆ ದಾಖಲಿಸಿರುವುದು ಗೊತ್ತೇ ಇದೆ. ಖಾಸಗಿ ವೀಡಿಯೋಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ಪ್ರತಿಷ್ಠೆಗೆ ಧಕ್ಕೆ ತಂದಿದ್ದಕ್ಕಾಗಿ ಸಾವಂತ್ ವಿರುದ್ಧ ದುರಾನಿ ಪ್ರಕರಣ ದಾಖಲಿಸಿದ್ದಾರೆ.

  ಇದನ್ನೂ ಓದಿ: ರಾಮಮಂದಿರ ಸಮಾರಂಭಕ್ಕೆ ಆಹ್ವಾನವಿಲ್ಲದ್ದಕ್ಕೆ ಪ್ರಾಣತ್ಯಾಗಕ್ಕೂ ಸಿದ್ಧರಾದ ‘ಮೌನಿ ಬಾಬಾ’! ಯಾರೀ ಸಂತ? ಅವರ ಪ್ರತಿಜ್ಞೆ ಏನು?

  ನಿರೀಕ್ಷಣಾ ಜಾಮೀನು ಕೋರಿ ಮುಂಬೈನ ದಿಂಡೋಶಿ ನ್ಯಾಯಾಲಯದಲ್ಲಿ ರಾಖಿ ಸಾವಂತ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಜ.8ರಂದು ನಡೆದ ವಿಚಾರಣೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶ್ರೀಕಾಂತ್ ವೈ ಭೋಂಸ್ಲೆ ಅರ್ಜಿಯನ್ನು ವಜಾಗೊಳಿಸಿದರು. ಶುಕ್ರವಾರ ಆದೇಶದ ಸಂಪೂರ್ಣ ವಿವರ ಬೆಳಕಿಗೆ ಬಂದಿದೆ. ರಾಖಿ ಸಾವಂತ್ ನನ್ನ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡಿದ್ದಾರೆ ಎಂದು ಆಕೆಯ ಮಾಜಿ ಪತಿ ಅನಿಲ್ ದುರಾನಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದು ಗೊತ್ತೇ ಇದೆ. ಸಾವಂತ್ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
  ದುರಾನಿ ರಾಖಿ ಸಾವಂತ್ ತನ್ನ ಪ್ರತಿಷ್ಠೆಗೆ ಹಾನಿ ಮಾಡಲು ತನ್ನ ಖಾಸಗಿ ವೀಡಿಯೊಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರಾಖಿ ಸಾವಂತ್ ಅವರ ವಕೀಲ ಅಲಿ ಖಾಸಿಫ್ ಖಾನ್ ದೇಶಮುಖ್ ಅವರನ್ನು ಬೋಗಸ್ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
  ರಾಖಿ ಸಾವಂತ್ ಬಿಡುಗಡೆ ಮಾಡಿರುವ ವಿಡಿಯೋಗಳು ಅಶ್ಲೀಲವಾಗಿವೆ ಎಂದು ಕೋರ್ಟ್ ಹೇಳಿದೆ. ಪ್ರಕರಣದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನು ನೀಡುತ್ತಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.

  ಹತ್ಯೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts