ಮದುವೆಯಾಗಿ ದೊಡ್ಡ ತಪ್ಪು ಮಾಡಿದರಂತೆ ರಾಖಿ ಸಾವಂತ್​

Rakhi Sawant - Final
Published on

ಮುಂಬೈ: 'ಬಿಗ್​ ಬಾಸ್​'ನ ಮೊದಲ ಸೀಸನ್​ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಸಾಕಷ್ಟು ಸುದ್ದಿ ಮಾಡಿದ್ದ ರಾಖಿ ಸಾವಂತ್​, ಇದೀಗ ಅದೇ ಕಾರ್ಯಕ್ರಮದ ಹೊಸ ಸೀಸನ್​ನಲ್ಲಿ ಚಾಲೆಂಜರ್​ ಆಗಿ ಭಾಗವಹಿಸುತ್ತಿದ್ದಾರೆ.

ಈ ಹೊಸ ಸೀಸನ್​ನಲ್ಲಿ ರಾಖಿ ಏನೆಲ್ಲಾ ಅವಾಂತರ ಮಾಡಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ, ಆಕೆ ಹೊಸ ಬಾಂಬ್​ ಸಿಡಿಸಿದ್ದಾರೆ. ಜೀವನದಲ್ಲಿ ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇನೆ. ಡಿಪ್ರೆಶನ್​ಗೂ ಒಳಗಾಗಿದ್ದೇನೆ. ಬಹಳಷ್ಟು ಜನ ಡಿಪ್ರೆಶನ್​ಗೆ ಒಳಗಾದವರು, ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಾರೆ. ಆದರೆ, ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ದೇವರು ನಮಗೆ ಜೀವನ ಕೊಟ್ಟಿದ್ದು, ಅದು ಬಹಳ ಅಮೂಲ್ಯವಾಗಿದ್ದು. ನನ್ನ ಪ್ರತಿಭೆಯ ಮೇಲೆ ನನಗೆ ವಿಶ್ವಾಸವಿದೆ. ಪ್ರತಿಭೆಯಿಂದಲೇ ಮತ್ತೆ ಗೆದ್ದುಬರುತ್ತೇನೆ ಎಂಬ ನನಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

ರಾಖಿ ಡಿಪ್ರೆಶನ್​ಗೆ ಕಾರಣ, ಆಕೆ ದಿವಾಳಿಯಾಗಿರುವುದಂತೆ. 'ಕುಟುಂಬದವರನ್ನು ನೋಡಿಕೊಳ್ಳುತ್ತಲೇ ನಾನು ದಿವಾಳಿಯಾದೆ. ಒಬ್ಬ ಶ್ರೀಮಂತನನ್ನು ಮದುವೆಯಾದರೆ, ಸಮಸ್ಯೆಗಳಿಂದ ಹೊರಬರಬಹುದು ಎಂದು ಯೋಚಿಸಿ ಮದುವೆ ಆದೆ. ಮದುವೆಯಾಗಿದ್ದು ನಾನು ಮಾಡಿದ್ದು ದೊಡ್ಡ ತಪ್ಪು' ಎನ್ನುವ ರಾಖಿಯ ಮದುವೆ ಮುರಿದಬಿದ್ದಿದೆಯಂತೆ. ಈ ಬಗ್ಗೆ 'ಬಿಗ್​ ಬಾಸ್​' ಮನೆಗೆ ಹೋದ ಮೇಲೆ ವಿವರವಾಗಿ ಮಾತನಾಡುತ್ತಾರಂತೆ.

ರಾಖಿ ಮದುವೆ ಮುರಿದುಬಿದ್ದಿರಬಹುದು. ಆದರೆ, ಅವರು ಮದುವೆಯಾಗಿರುವುದು ಯಾರನ್ನು ಎಂಬ ವಿಷಯ ಇದುವರೆಗೂ ಬಹಿರಂಗ ಮಾಡಿಲ್ಲ. ಅಷ್ಟೇ ಅಲ್ಲ, ಗಂಡನ ಫೋಟೋವೊಂದನ್ನು ಎಲ್ಲೂ ಶೇರ್​ ಮಾಡಿಲ್ಲ. ಈ ಕುರಿತು ಮಾತನಾಡಿರುವ ಅವರು, 'ನನ್ನ ಗಂಡನಿಗೆ ಜಗತ್ತಿನ ಎದುರಿಗೆ ಬರುವುದಕ್ಕೆ ಇಷ್ಟವಿಲ್ಲ. ಒಂದು ವರ್ಷದಿಂದ ಆತ ಇಲ್ಲಿಗೆ ಬಂದಿಲ್ಲ. ಇಂಗ್ಲೆಂಡ್​ನಲ್ಲೇ ಇದ್ದಾನೆ. ನನ್ನ ಮದುವೆಯೂ ದುಖಾಂತ್ಯದಲ್ಲಿ ಅಂತ್ಯವಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net