More

  ಪಾಕ್​ ಬೆಂಬಲಿಗನಿಗೆ ರಾಜ್ಯಸಭೆ ಸದಸ್ಯ ಪಟ್ಟ: ಕಾಂಗ್ರೆಸ್​ ವಿರುದ್ಧ ಕಿಡಿಕಾಡಿದ ಬಿಜೆಪಿ!

  ಬೆಂಗಳೂರು: ಪಾಕಿಸ್ತಾನಿ ಸಹಾನುಭೂತಿಗೆ ರಾಜಾತಿಥ್ಯ ನೀಡಿದ್ದಾಯಿತು, ಈಗ ಪಾಕಿಸ್ತಾನಿ ಬೆಂಬಲಿಗ ನಾಯಕನಿಗೆ ರಾಜ್ಯಸಭೆಯ ಸದಸ್ಯನ ಪಟ್ಟ. ಇದು ರಾಜ್ಯ ಕಾಂಗ್ರೆಸ್​ ಕರ್ನಾಟಕವನ್ನು ಭಾರತ ವಿರೋಧಿ ಕೇಂದ್ರವನ್ನಾಗಿಸಿರುವ ಪರಿ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

  ಇದನ್ನೂ ಓದಿ:ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ: ಪತ್ರಕರ್ತರ ಪ್ರಶ್ನೆಗೆ ‘ನಡಿಯೋ ಆಚೆ’ ಎಂದ ಸಂಸದ ನಾಸಿರ್‌ ಹುಸೇನ್‌!

  ವಿಧಾನಸೌಧದ ಪಡಸಾಲೆಯಲ್ಲಿ ರಾಜ್ಯಸಭೆಯ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್​ನ ನಾಸಿರ್​ ಹುಸೇನ್​ ಬೆಂಬಲಿಗರು ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹದ ಘೋಷಣೆ ಖಂಡಿಸಿ ತಮ್ಮ ಎಕ್ಸ್​ ಖಾತೆಯಲ್ಲಿ ಬಿಜೆಪಿ ಟ್ಟೀಟ್​ ಮಾಡಿದೆ.

  ಭಯೋತ್ಪಾದಕರಿಗೆ ಬ್ರದರ್ಸ್, ಅಮಾಯಕರು ಎಂಬ ಪಟ್ಟ ಕಟ್ಟಿದ ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯದ ಫಲಿತಾಂಶ ಪದೇ ಪದೇ ಕರ್ನಾಟಕದಲ್ಲಿ ಕಾಣ ಸಿಗುತ್ತಿದೆ. ಓಲೈಕೆ ರಾಜಕಾರಣದ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ಕಾಂಗ್ರೆಸ್‌ನ ಇತರ ನಾಯಕರು ಪಾಕಿಸ್ತಾನಿ ಸಹಾನುಭೂತಿಗಳಿಗೆ ಕೆಲವೇ ಸಮಯದಲ್ಲಿ ಕ್ಲೀನ್ ಚಿಟ್ ನೀಡಲು ಸದಾ ಸಿದ್ಧವಾಗಿರುತ್ತಾರೆ ಎಂದು ಬಿಜೆಪಿ ಕಿಡಿಕಾಡಿದೆ.

  ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ‌. ಕಾಂಗ್ರೆಸ್‌ನ ದೇಶ ವಿರೋಧಿ ಕಾರ್ಯಾಚರಣೆಗೆ ಕರ್ನಾಟಕ ಪ್ರಯೋಗ ಶಾಲೆಯಾಗಲು ನಾವೆಂದಿಗೂ ಬಿಡುವುದಿಲ್ಲ ಎಂದು ಹೇಳಿದೆ.

  ವಿಧಾನಸೌಧ ಪೊಲೀಸ್​ ಎದುರು ಪ್ರತಿಭಟನೆ, ದೂರು: ದೇಶದ್ರೋಹ ಹೇಳಿಕೆ ಖಂಡಿಸಿ ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗ ಇಂದು ರಾತ್ರಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ನಡೆಸಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಮಾನ್ಯ ಆರ್. ಅಶೋಕ್ , ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು ಈ ಘಟನೆ ರಾಜ್ಯ ಕಾಂಗ್ರೆಸ್​ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಕಾಂಗ್ರೆಸ್​ ಕಾರ್ಯಕರ್ತರಿಂದ ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹಿ ಹೇಳಿಕೆ: ಆರ್.ಅಶೋಕ್​ ಆಕ್ರೋಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts