More

  ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ: ಪತ್ರಕರ್ತರ ಪ್ರಶ್ನೆಗೆ ‘ನಡಿಯೋ ಆಚೆ’ ಎಂದ ಸಂಸದ ನಾಸಿರ್‌ ಹುಸೇನ್‌!

  ಬೆಂಗಳೂರು: ವಿಧಾನಸೌಧದ ಪಡಸಾಲೆಯಲ್ಲಿ ರಾಜ್ಯಸಭೆಯ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್​ನ ನಾಸಿರ್​ ಹುಸೇನ್​ ಬೆಂಬಲಿಗರು ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹದ ಘೋಷಣೆ ಕೂಗಿದ್ದು, ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ನಾಸಿರ್‌ ಹುಸೇನ್‌ ಅವರನ್ನು ಈ ಬಗ್ಗೆ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ದರ್ಪದಿಂದ ಉತ್ತರಿಸಿದ್ದಾರೆ.

  ಇದನ್ನೂ ಓದಿ: ಕಾಂಗ್ರೆಸ್​ ಕಾರ್ಯಕರ್ತರಿಂದ ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹಿ ಹೇಳಿಕೆ: ಆರ್.ಅಶೋಕ್​ ಆಕ್ರೋಶ

  ನಿಮ್ಮ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆಯನ್ನು ವಿಧಾನಸೌಧದಲ್ಲೇ ಕೂಗಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ‘ಏನ್‌ ನಡಿಯೋ ಆಚೆ..’ ಎಂದು ಪತ್ರಕರ್ತನ ವಿರುದ್ಧ ಕಿಡಿಕಾಡಿದ್ದಾರೆ. ಹುಚ್ಚರ ಥರ ಪ್ರಶ್ನೆ ಕೇಳಬೇಡ ಎಂದಿದ್ದಾರೆ.

  ಬಳಿಕ ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ, ಈ ರೀತಿ ಕೂಗಿದ್ದು ನನಗೆ ಕೇಳಿಸಿಲ್ಲ. ಹಾಗೇನಾದರೂ ಹೇಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳುವ ಈ ಹೇಳಿಕೆಯಿಂದ ಜಾರಿಗೊಂಡಿದ್ದಾರೆ.

  ರಾಜ್ಯಸಭಾ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ವಿಧಾನಸೌಧದ ಪಡಸಾಲೆಯಲ್ಲಿ ರಾಜ್ಯಸಭೆಯ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್​ನ ನಾಸಿರ್​ ಹುಸೇನ್​ ಬೆಂಬಲಿಗರು ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹದ ಘೋಷಣೆ ಕೂಗಿದ್ದು ಬಿಜೆಪಿ ಸೇರಿದಂತೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದೆ.

  ಕಾಂಗ್ರೆಸ್​ ಕಾರ್ಯಕರ್ತರಿಂದ ಪಾಕಿಸ್ತಾನ್​ ಜಿಂದಾಬಾದ್​ ಎಂದು ದೇಶದ್ರೋಹಿ ಹೇಳಿಕೆ: ಆರ್.ಅಶೋಕ್​ ಆಕ್ರೋಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts