More

  ಸಿನಿಮಾ ಇಂಡಸ್ಟ್ರಿಗೆ ಗುಡ್​ಬೈ ಹೇಳ್ತಾರಾ ಸೂಪರ್​ ಸ್ಟಾರ್​ ರಜನಿಕಾಂತ್​​!; ಕೊನೆಯ ಸಿನಿಮಾ ಯಾವುದು?

  ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್‌ ಭಾರತೀಯ ಚಿತ್ರರಂಗ ಕಂಡ ಖ್ಯಾತ ನಟ. ಈ ನಟನ ವಿಶ್ವದ ಮೂಲೆ ಮೂಲೆಯಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇವರ ಸಿನಿಮಾವನ್ನು ಮುಗಿಬಿದ್ದು ನೋಡುವ ಅಭಿಮಾನಿಗಳ ಬಳಗವಿದೆ. ಆದರೆ ರಜನಿಕಾಂತ್​​ ಸಿನಿಮಾ ಜರ್ನಿಯ ಕುರಿತಾಗಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದೆ.

  ರಜನಿಕಾಂತ್ ಸದ್ಯ ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೈಲರ್ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೂಪರ್ ಸ್ಟಾರ್ ಅವರನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  ಕಳೆದ ಕೆಲವು ವರ್ಷಗಳಿಂದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕೊನೆಯ ಚಿತ್ರ ಚರ್ಚೆ ಆರಂಭವಾಗಿದೆ. ತಲೈವಾ ಅಭಿಮಾನಿಗಳಿಗೆ ನಿರಾಸೆಯಾಗುವಂತ ಸುದ್ದಿಯೊಂದು ಹರಿದಾಡುತ್ತಿದ್ದು, ತನ್ನ ಸಿನಿ ಜರ್ನಿಗೆ ಗುಡ್ ಬೈ ಹೇಳಿ, ನಟನೆಯಿಂದ ನಿವೃತ್ತಿ ಪಡೆಯುತ್ತಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  ರಜನಿಕಾಂತ್ ಜೈಲರ್ ಸಿನಿಮಾ ಬಳಿಕ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯ ಮೂಡಿ ಬರುತ್ತಿರುವ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ಸಿನಿಮಾ ಬಳಿಕ ರಜನಿಕಾಂತ್ ನಿವೃತ್ತಿ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ತಮಿಳು ಸಿನಿಮಾರಂಗದಲ್ಲಿ ವೈರಲ್ ಆಗಿದೆ.

  ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಮುಂದಿನ ಸಿನಿಮಾ ರಜನಿಕಾಂತ್ ಜೊತೆ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಇವರಿಬ್ಬರೂ ಕನ್ಫರ್ಮ್ ಮಾಡಿಲ್ಲ. ರಜನಿಕಾಂತ್ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡೋದು ಕನ್ಫರ್ಮ್ ಅಂತ ತಮಿಳು ನಟ ಮಿಸ್ಕಿನ್ ರಿವೀಲ್ ಮಾಡಿದ್ದಾರೆ. ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಸ್ವತ: ರಜನಿಕಾಂತ್ ಅವರೇ ಲೋಕೇಶ್ ಕನಗರಾಜ್ ಅವರನ್ನು ಕರೆದು ಅವಕಾಶ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ರಜನಿ ನಿವೃತ್ತಿ ಬಗ್ಗೆನೂ ಮಾತಾಡಿದ್ದಾರೆ ಎನ್ನಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಇದನ್ನೂ ಓದಿ: 1200 ರೂ. ಬೆಲೆಯ ಐಪಿಎಲ್​​ ಟಿಕೆಟ​​ನ್ನು 8 ಸಾವಿರಕ್ಕೆ ಪೊಲೀಸರೇ ಮಾರುತ್ತಿದ್ದಾರೆ; ಆರ್​ಸಿಬಿ ಅಭಿಮಾನಿಗಳ ಆಕ್ರೋಶ

  ರಜನಿಕಾಂತ್ ಇಂಥ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಭಿಮಾನಿಗಳು ಮಾದಿಸುತ್ತಿದ್ದಾರೆ. ಅಲ್ಲದೆ ಇಂಥ ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸ್ವತಃ ರಜನಿಕಾಂತ್ ಅವರೇ ಹೇಳುವವರೆಗೂ ಇದನ್ನೆಲ್ಲ ನಂಬಲ್ಲ ಎಂದು ಹೇಳುತ್ತಿದ್ದಾರೆ.

  ಕಾಲಾ ನಂತರ, ಸೂಪರ್‌ಸ್ಟಾರ್‌ನ ಪ್ರತಿಯೊಂದು ಚಿತ್ರವೂ ಅವರ ಕೊನೆಯ ಚಿತ್ರ ಎಂದು ವದಂತಿಗಳಿವೆ. ಆದರೆ ಇತ್ತೀಚೆಗೆ ರಜನಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲೈವರ್ ಅವರ 169 ನೇ ಚಿತ್ರ, ಜೈಲರ್ ಅವರ 170 ನೇ ಚಿತ್ರವಾಗಿದೆ. 171 ಸಿನಿಮಾದ ನಂತರ ಯಾವುದೇ ಚಿತ್ರದಲ್ಲಿ ರಜನಿಕಾಂತ್​ ಅವರು ಕಾಣಿಸಿಕೊಳ್ಳುವುದಿಲ್ಲ ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.

  ಚಂಡಮಾರುತದ ರಭಸಕ್ಕೆ ಆಕಾಶದಲ್ಲಿ ಹಾರಾಡಿದ ಸೋಫಾ; ವಿಡಿಯೋ ವೈರಲ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts