More

  ಚಂಡಮಾರುತದ ರಭಸಕ್ಕೆ ಆಕಾಶದಲ್ಲಿ ಹಾರಾಡಿದ ಸೋಫಾ; ವಿಡಿಯೋ ವೈರಲ್

  ಟರ್ಕಿ: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇತ್ತೀಚೆಗೆ ಚಂಡಮಾರುತ ಅಪ್ಪಳಿಸಿತ್ತು. ಈ ವೇಳೆ ಗಾಳಿಯ ರಭಸಕ್ಕೆ ಸೋಫಾ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.

  ಚಂಡಮಾರುತವು ಟರ್ಕಿಯ ರಾಜಧಾನಿ ಅಂಕಾರಾವನ್ನು ಅಪ್ಪಳಿಸಿತು, ಇದರಿಂದಾಗಿ ಮನೆಯ ಒಳಗಿದ್ದ ಪೀಠೋಪಕರಣಗಳು ಆಕಾಶದಲ್ಲಿ ಹಾರಿ ಹೊರಗೆ ಬಂದಿವೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಬಲವಾದ ಗಾಳಿಗೆ ಅಪಾರ ಆಸ್ತಿ ನಷ್ಟವಾಗಿದೆ.

  ವಿಡಿಯೋದಲ್ಲಿ ಏನಿದೆ?: ಅಂಕಾರಾದಲ್ಲಿ ಬಲವಾದ ಬಿರುಗಾಳಿಯಿಂದಾಗಿ ಮನೆಯೊಳಗೆ ಇರಿಸಲಾದ ಪೀಠೋಪಕರಣಗಳು ಅಂದರೆ ಸೋಫಾ ಆಕಾಶದಲ್ಲಿ ಹಾರುವ ದೃಶ್ಯ ಸೆರೆಯಾಗಿದೆ. ಬಲವಾದ ಗಾಳಿಯಿಂದಾಗಿ ಸೋಫಾ ಆಕಾಶದಲ್ಲಿ ಹಾರಿ ಮತ್ತೊಂದು ಕಟ್ಟಡಕ್ಕೆ ಅಪ್ಪಳಿಸಿದೆ. ಈ ದೃಶ್ಯ ಚಂಡಮಾರುತದ ತೀವ್ರತೆ ಎಷ್ಟಿತ್ತು ಎನ್ನುವುದನ್ನು ತೋರಿಸಿದೆ.

  ವಿಡಿಯೋ ಚಿತ್ರೀಕರಿಸಿದ ಓನೂರ್ ಕಲ್ಮಾಜ್, ಘಟನೆಯಿಂದ ಯಾರಿಗೂ ಹಾನಿಯಾಗಿಲ್ಲ. ಮನೆಯ ಒಳಗೆ ಇದ್ದ ಪೀಠೋಪಕರಣಗಳು ಗಾಳಿಯಲ್ಲಿ ಹಾರಿ ಬಂದು ತಮ್ಮ ತೋಟದಲ್ಲಿ ಬಿದ್ದಿವೆ ಎಂದು ಬರೆದುಕೊಂಡು ವಿಡಿಯೋವನ್ನು ಶೇರ್​​ ಮಾಡಿದ್ದಾರೆ.

  ಒಬ್ಬರು ಇಬ್ಬರಿಂದ ಸೋಫಾ ಎತ್ತವುದು ಕಷ್ಟ, ಹೀಗಿರುವಾಗ ಆ ಸೋಫಾ ಗಾಳಿಯಲ್ಲಿ ಹಾರಾಡುವುದು ಅಂದರೆ ಇದು ನಿಜಕ್ಕೂ ಆಶ್ಚರ್ಯಕರ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

  ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು!

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts