More

    ದಳಪತಿ ವಿಜಯ್​ ಹೊಸ ರಾಜಕೀಯ ಪಕ್ಷ; ಸೂಪರ್​ಸ್ಟಾರ್​ ರಜಿನಿಕಾಂತ್​ ಏನಂದ್ರು ಗೊತ್ತಾ?

    ಚೆನ್ನೈ: 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗುರಿಯಲ್ಲಿಟ್ಟುಕೊಂಡು ರಾಜಕೀಯ ಪಕ್ಷ ಘೋಷಿಸಿರುವ ನಟ  ದಳಪತಿ ವಿಜಯ್​ ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ತಯಾರಿ ನಡೆಸುತ್ತಿದ್ದಾರೆ. ಇತ್ತ ನಟ ಹೊಸ ಪಕ್ಷ ಘೋಷಿಸುತ್ತಿದ್ದಂತೆ ಸ್ಟಾರ್​ ನಟರು ಶುಭ ಕೋರಿದ್ದು, ಇದೀಗ ಈ ಸಾಲಿಗೆ ಸೂಪರ್​ಸ್ಟಾರ್​ ರಜಿನಿಕಾಂತ್​ ಸೇರ್ಪಡೆಯಾಗಿದ್ದಾರೆ.

    ಇತ್ತೀಚಿಗೆ ಈ ನಟರಿಬ್ಬರು ಸ್ಟಾರ್​ವಾರ್​ ಕುರಿತಾಗಿ ಹೆಚ್ಚು ಸದ್ದು ಮಾಡಿದ್ದರು. ಇದೀಗ ರಜಿನಿಕಾಂತ್​ ಮಾತಣಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಫ್ಯಾನ್​ವಾರ್​ಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ.

    ಇದನ್ನೂ ಓದಿ: ಟಿ-20 ವಿಶ್ವಕಪ್​; ಭಾರತ-ಪಾಕ್​ ಹೈವೋಲ್ಟೇಜ್​ ಕದನಕ್ಕೆ ಟೈಮ್​ ಫಿಕ್ಸ್​

    ವೆಟ್ಟೈಯನ್ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಸೂಪರ್​ಸ್ಟಾರ್​ ರಜಿನಿಕಾಂತ್​ ಚೆನ್ನೈ ಏರ್​ಪೋರ್ಟ್​ನಲ್ಲಿ ತೆರಳುತ್ತಿದ್ದ ವೇಳೆ ಪ್ರತಕರ್ತರೊಬ್ಬರು ವಿಜಯ್​ ಅವರು ನೂತನ ರಾಜಕೀಯ ಪಕ್ಷ ಘೋಷಿಸಿರುವ ಕುರಿತು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ರಜಿನಿಕಾಂತ್​ ಶುಭ ಹಾರೈಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನಟರಿಬ್ಬರ ನಡುವಿನ ಸ್ಟಾರ್​ವಾರ್​ಗೆ ಬ್ರೇಕ್​ ಬೀಳುವ ಸಾಧ್ಯತೆ ದಟ್ಟವಾಗಿದೆ.

    ಒಡೆದ ಮನೆಯಂತಾಗಿರುವ ತಮಿಳುನಾಡು ರಾಜಕೀಯಕ್ಕೆ 49 ವರ್ಷದ ಮಾಸ್​ ಹೀರೋ ದಳಪತಿ ವಿಜಯ್ ಅಧಿಕೃತವಾಗಿ ಎಂಟ್ರಿ ಕೊಟ್ಟು, ಹೊಸ ಆಟಕ್ಕೆ ರೆಡಿಯಾಗಿದ್ದಾರೆ. ಜಯಲಲಿತಾ, ಕರುಣಾನಿಧಿ ಸಾವಿನ ಬಳಿಕ ಭಣಗುಡುತ್ತಿದ್ದ ತಮಿಳುನಾಡು ರಾಜಕೀಯಕ್ಕೆ ಈಗ ಹೊಸ ರಂಗು ಬಂದಿದೆ. ತಮ್ಮ ಸಿನಿಮಾ ಡೈಲಾಗ್​ ಮೂಲಕ ರಾಜಕೀಯ ಪಕ್ಷಗಳಿಗೆ ಚಾಟಿ ಬೀಸುತ್ತಿದ್ದ ವಿಜಯ್​,  ತಮಿಳು ಜನರ ಪಾಲಿಗೆ ಹೊಸ ಬ್ರಾಂಡ್ ಆಗ್ತಾರಾ. ಉತ್ತರ ಸಿಗಲು 2026ರ ಚುನಾವಣೆವರೆಗೂ ಕಾಯಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts