ಟೆಸ್ಟ್​ ಪಂದ್ಯದ ಕಾಮೆಂಟರಿ ವೇಳೆ ದಿಢೀರ್​ ಹೊರನಡೆದ ಸುನೀಲ್​ ಗಾವಸ್ಕರ್​; ಕಾರಣ ಹೀಗಿದೆ

Sunil Gavaskar
Published on

ವಿಶಾಖಪಟ್ಟಣಂ: ಇಲ್ಲಿನ ವೈ.ಎಸ್​. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರತ ಹಾಗೂ ಇಂಗ್ಲೆಂಡ್​ ನಡುವಿನ ಎರಡನೇ ಟೆಸ್ಟ್​ ಪಂದ್ಯ ಒಂದಿಲ್ಲೊಂದು ಕಾರಣಕ್ಕೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದ್ದು, ಇದೀಗ ಮತ್ತೊಂದು ವಿಚಾರಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಯಶಸ್ವಿ ಜೈಸ್ವಾಲ್ (209) ದ್ವಿಶತಕದ ನೆರವಿನೊಂದಿಗೆ ಟೀಂ ಇಂಡಿಯಾ ಬೃಹತ್​ ಗುರಿ ಪೇರಿಸುವತ್ತ ಸಾಗಿದೆ.

ಟೀಂ ಇಂಡಿಯಾದ ಇನ್ನಿಂಗ್ಸ್​ ನಡುವೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನೀಲ್​ ಗಾವಸ್ಕರ್​ ಪಂದ್ಯದ ನಡುವೆಯೇ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ಮೊದಲಿಗೆ ನಿಕಟ ಕಾರಣ ತಿಳಿದು ಬಂದಿರಲಿಲ್ಲ. ಆದರೆ, ಆ ನಂತರ ಕಾರಣವನ್ನು ತಿಳಿಸಲಾಗಿದೆ.

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸುನೀಲ್ ಗಾವಸ್ಕರ್​ ಅವರ ಅತ್ತೆ ನಿಧನರಾದ ಕಾರಣ ಅವರು ಪಂದ್ಯದ ಮದ್ಯದಿಂದ ಹೊರನಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಾನ್ಪುರಕ್ಕೆ ತೆರಳಬೇಕಾಗಿರುವ ಕಾರಣ ಅವರ ವಿಶಾಖಪಟ್ಟಣಂನಿಂದ ತುರ್ತಾಗಿ ತೆರಳಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಶಸ್ವಿ ಜೈಸ್ವಾಲ್​ ದ್ವಿಶತಕದ ಬಲದೊಂದಿಗೆ ಎರಡನೇ ದಿನದಾಟವನ್ನು ಆರಂಭಿಸಿದ ಟೀಂ ಇಂಡಿಯಾ 112 ಓವರ್​ಗಳಲ್ಲಿ 396 ರನ್​ ಗಳಿಸಿ ಆಲೌಟ್​ ಆಗಿದೆ. ಪ್ರವಾಸಿ ತಂಡದ ಬ್ಯಾಟಿಂಗ್​ ಕ್ರಮಾಂಕದ ಮೇಲೆ ಅತಿಥೇಯರು ಹೇಗೆ ಕಡಿವಾಣ ಹೇರಲಿಕದ್ದಾರೆ ಎಂದು ಕಾದು ನೋಢಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net