ಆರ್​ಸಿಬಿ-ಸಿಎಸ್​ಕೆ ಪಂದ್ಯದ ಕುರಿತು ಪೋಸ್ಟ್​; ತಮಿಳು ಜನರ ಕ್ಷಮೆಯಾಚಿಸಿದ ಕನ್ನಡತಿ

RCB Vs CSk
Published on

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನಾವು ಕೆಲವೊಮ್ಮೆ ಮಾಡುವ ಪಪೋಸ್ಟ್​ಗಳು ತಕ್ಷಣಕ್ಕೆ ವೈರಲ್​ ಆಗದಿದ್ದರು ಮುಂದೊಂದು ದಿನ ಅದು ಹೆಚ್ಚು ಸದ್ದು ಮಾಡುತ್ತದೆ. ಕೆಲವೊಮ್ಮೆ ಇಂತಹ ಸುದ್ದಿಗಳು ಪಾಸಿಟಿವ್​ ಹಾಗೂ ನೆಗಟಿವಿಟಿ ವಿಚಾರವಾಗಿ ವೈರಲ್​ ಆಗಿ ನಮಗೆ ಸಂಕಷ್ಟವನ್ನುಂಟು ಮಾಡುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಖ್ಯಾತ ನಟಿಯೊಬ್ಬರು 12 ವರ್ಷದ ಹಿಂದೆ ಮಾಡಿದ್ದ ಪೋಸ್ಟ್ ​ಒಂದು ಸಂಕಷ್ಟ ತಂದಿದ್ದು ಆಕೆ ಕ್ಷಮೆಯಾಚಿಸಿದ್ದಾರೆ.

ಬೆಂಗಳೂರು ಮೂಲದ ನಟಿ ಧನ್ಯಾ ಬಾಲಕೃಷ್ಣ 12 ವರ್ಷಗಳ ಹಿಂದೆ ನಡೆದ ಸಿಎಸ್​ಕೆ ಹಾಗೂ ಆರ್​ಸಿಬಿ ನಡುವಿನ ಪಂದ್ಯದ ಕುರಿತು ಸಾಮಾಜಿಕ ಜಾಲತಾಣದಲ್ಇ ಬರೆದುಕೊಂಡಿದ್ದರು. ಈ ವಿಚಾರ ಈಗ ಸದ್ದು ಮಾಡುತ್ತಿದ್ದು, ಅವರು ತಮಿಳು ಜನರ ಕ್ಷಮೆಯಾಚಿಸಿದ್ದಾರೆ.

ಧನ್ಯಾ ಬಾಲಕೃಷ್ಣ, ತೆಲುಗು, ತಮಿಳು ಚಿತ್ರರಂಗದ ಜನಪ್ರಿಯ ಪೋಷಕ ನಟಿ. ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಇವರ ನಟನೆಯ ತಮಿಳು ಸಿನಿಮಾ ‘ಲಾಲ್ ಸಲಾಂ’ ಬಿಡುಗಡೆ ಆಗಲಿದ್ದು, ಇದರ ನಡುವೆ ಧನ್ಯಾ ಅವರದ್ದು ಎನ್ನಲಾಗುತ್ತಿರುವ ಹಳೆಯ ಪೋಸ್ಟ್ ಒಂದು ವೈರಲ್ ಆಗಿ ವಿವಾದ ಸೃಷ್ಟಿಸಿದೆ. ‘ಲಾಲ್ ಸಲಾಂ’ ಸಿನಿಮಾ ಬಿಡುಗಡೆಗೆ ತಡೆ ಒಡ್ಡುವ ಬೆದರಿಕೆಯನ್ನು ಸಹ ಕೆಲವರು ಹಾಕಿದ್ದು, ಇದೀಗ ನಟಿ ಧನ್ಯಾ ಬಾಲಕೃಷ್ಣ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Dhanya Balakrishna

ಧನ್ಯಾ ಅವರ ಪೋಸ್ಟ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ತಂಡವನ್ನು ಕಟುವಾಗಿ ಟೀಕಿಸಿರುವ ಅವರು, ನೀವು ನೀರು, ಕರೆಂಟ್​ಗಾಗಿ ಬೇಡಿಕೊಳ್ಳಿ ನಾವು ಕೊಡುತ್ತೇವೆ. ನಿಮ್ಮ ಜನರು ಬಂದು ನಮ್ಮ ಸುಂದರ ನಗರವನ್ನು ಆಕ್ರಮಿಸಿಕೊಂಡಿದ್ದಾರೆ. ನಾವು ಈಗ ಕರುಣೆ ತೋರಿದ್ದಕ್ಕೆ ಈಗ ನೀವು ಪ್ಲೇ ಆಫ್ಸ್​ ಪ್ರವೇಶಿಸಿದ್ದೀರಾ ನಿಮಗೆ ನಾಚಿಕೆಯಾಗುವುದಿಲ್ಲವಾ ಎಂದು ಪೋಸ್ಟ್​ ಮಾಡಿ ಟೀಕಿಸಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಧನ್ಯಾ, ‘12 ವರ್ಷಗಳ ಆ ಪೋಸ್ಟ್ ಅನ್ನು ನಾನು ಮಾಡಿಲ್ಲ. ಅದು ಯಾವುದೋ ಟ್ರೋಲಿಗರು ಮಾಡಿರುವ ಎಡಿಟ್. ಆ ಘಟನೆ ನಡೆದಾಗಲೇ ನಾನು ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ನನಗೆ ಅನ್ನ ನೀಡುತ್ತಿರುವ ನನ್ನ ವೃತ್ತಿಯ ಆಣೆಯಾಗಿಯೂ ನಾನು ಈ ಮಾತನ್ನು ಹೇಳುತ್ತಿದ್ದೇನೆ. ನಾನು ಈ ವಿಷಯವಾಗಿ ಮೊದಲೇ ಸ್ಪಷ್ಟನೆ ನೀಡಬೇಕು ಎಂದುಕೊಂಡಿದ್ದೆ.

ಆದರೆ ಇದೇ ವಿಷಯವಾಗಿ ಸಾಕಷ್ಟು ಬೆದರಿಕೆಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಬಂದಿದ್ದವು. ನನ್ನ ಕುಟುಂಬದ ಭದ್ರತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈವೆರೆಗೆ ಈ ವಿಷಯದ ಬಗ್ಗೆ ನಾನು ಮಾತನಾಡಿರಲಿಲ್ಲ ಎಂದಿರುವ ಧನ್ಯಾ, ನನ್ನ ಈ ವಿವಾದದಿಂದ ರಜನೀಕಾಂತ್, ಐಶ್ವರ್ಯಾ ರಜನೀಕಾಂತ್ ಹಾಗೂ ರಜನೀಕಾಂತ್ ಅಭಿಮಾನಿಗಳಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ನಟಿ ಧನ್ಯಾ ಬಾಲಕೃಷ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net