

ಚೆನ್ನೈ: ತಲೈವಾ ರಜನಿಕಾಂತ್(Rajinikanth) ಮತ್ತು ನಿರ್ದೇಶಕ ಡಿಜೆ ಜ್ಞಾನವೇಲ್ ಕಾಂಬೀನೇಷನ್ನ ವೆಟ್ಟೈಯಾನ್ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇದಕ್ಕೆ ದಿಗ್ಗಜರು ಸಿನಿಮಾದಲ್ಲಿರುವುದು ಒಂದು ಕಾರಣವಾಗಿದ್ದಾರೆ ಮತ್ತೊಂದು ರಜನಿಕಾಂತ್ ಅವರ 170ನೇ ಸಿನಿಮಾ ಎಂಬುವುದು ಇರಬಹುದು. ದಸರಾ ಸಮಯದಲ್ಲಿ ಅಕ್ಟೋಬರ್ 10ರಂದು ವೆಟ್ಟೈಯಾನ್ ಚಿತ್ರ ತೆರೆಗೆ ಅಪ್ಪಳಿಸಿದೆ. ಲೈಕಾ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಎರಡು ಹಾಡಿನ ಲಿರಿಕ್ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಈ ಸಾಂಗ್ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ.
ಇತ್ತೀಚೆಗೆ ನಡೆದ ಸಿನಿಮಾದ ಆಡಿಯೋ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಸೂಪರ್ಸ್ಟಾರ್ ರಜನಿಕಾಂತ್, ಸಿನಿಮಾ ಹೇಗಿದೆ ಎಂಬುದನ್ನು ಅಭಿಮಾನಿಗಳು ನೋಡಿ ಹೇಳಬೇಕು. ಸಿನಿಮಾದಲ್ಲಿ ದೊಡ್ಡ ದೊಡ್ಡ ಸೆಲಿಬ್ರಿಟಿಗಳನ್ನು ಕರೆತಂದು ನಿರ್ದೇಶಕರು ಕೇಳಿದ ಸ್ಥಳಗಳನ್ನು ವ್ಯವಸ್ಥೆ ಮಾಡಿದ್ದಕ್ಕಾಗಿ ನಿರ್ಮಾಣ ತಂಡವನ್ನು ಶ್ಲಾಘಿಸಿದರು. ವೆಟ್ಟೈಯಾನ್ ಸಿನಿಮಾದಲ್ಲಿನ ಮನಸಿಲಯೋ ಹಾಡು ಭಾರೀ ಹಿಟ್ ಆಗಲು ಅದರ ನೃತ್ಯ ನಿರ್ದೇಶಕ ದಿನೇಶ್ ಕಾರಣ ಎಂದು ಹೇಳಿದರು.ಹಾಡಿಗೆ ಸರಳವಾಗಿರುವ ಸ್ಟೆಪ್ ಹೇಳಿಕೊಟ್ಟರು. ದಿನೇಶ್ ಅವರು ಹೇಳಿಕೊಟ್ಟ ಈ ಸಿಂಪಲ್ ಸ್ಟೆಪ್ ಸಾಂಗ್ ಹಿಟ್ ಆಗಲು ಕಾರಣ ಎಂದರು.
ಸಂಗೀತ ಸಂಯೋಜಕ ಅನಿರುದ್ಧ್ ನಾಲ್ಕನೇ ಬಾರಿಗೆ ರಜನಿಕಾಂತ್ ಅವರೊಂದಿಗೆ ವೆಟ್ಟೈಯಾನ್ ಚಿತ್ರದಲ್ಲಿ ಜತೆಯಾಗಿದ್ದಾರೆ. ಬಿಡುಗಡೆಯಾಗಿರವು ಎರಡು ಹಾಡುಗಳು ಸೂಪರ್ ಹಿಟ್ ಆಗಿದೆ. ಮನಸಿಲಯೋ ಹಾಡಿನಲ್ಲಿ ಮಂಜು ಜತೆಗೆ ರಜನಿಕಾಂತ್ ಅದ್ಬುತವಾಗಿ ಅಭಿನಯಿಸಿದ್ದಾರೆ. ಈ ಹಾಡನ್ನು ಬರೆದಿರುವ ಸೂಪರ್ ಸುಬ್ಬು ಮತ್ತು ವಿಧು ಮತ್ತು ಪಾಟಲನ್ನು ಹಾಡಿದವರಿಗೆ ರಜನಿಕಾಂತ್ ಧನ್ಯವಾದ ತಿಳಿಸುತ್ತೇನೆ ಎಂದು ರಜನಿಕಾಂತ್ ಹೇಳಿದರು. ಈ ಹಾಡಿಗೆ ದಿನೇಶ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಈ ಹಾಡಿನಲ್ಲಿ ರಜನಿ ಮತ್ತು ಮಂಜುವಾರಿಯವರ ಕೆಮಿಸ್ಟ್ರಿ ಅತ್ಯುತ್ತಮವಾಗಿದೆ.ಈ ಹಾಡಿಗೆ ಇಷ್ಟೊಂದು ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಮಂಜು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮನಸಿಲಯೋ ಹಾಡಿಗೆ ರಜನಿಕಾಂತ್ ಹಾಕಿರುವ ಸ್ಟೆಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿತ್ತು.
ಸತತವಾಗಿ ಮುಂಚೂಣಿಯಲ್ಲಿರುವ ಯುವ ನಿರ್ದೇಶಕರ ಜತೆ ಸಿನಿಮಾ ನೀಡುತ್ತಿರುವ ರಜನಿಕಾಂತ್ ಕಳೆದ ವರ್ಷ ಜೈಲರ್ ಉತ್ತಮ ಪ್ರದರ್ಶನ ನೀಡಿದ್ದು, ಮುಂದಿನ ಚಿತ್ರ ವೆಟ್ಟೈಯಾನ್ ಸೂಪರ್ ಹಿಟ್ ಆಗುವ ನಿರೀಕ್ಷೆಯಿದೆ.(ಏಜೆನ್ಸೀಸ್)