ನನ್ನ ಮಿಂಚುವ ಹಲ್ಲಿಗೆ ಕಾರಣ ಇದೆ ಎಂದ ನ್ಯಾಷನಲ್​ ಕ್ರಶ್​​; ರಹಸ್ಯ ಬಿಚ್ಚಿಟ್ಟ ರಶ್ಮಿಕಾ

Untitled-design-2024-09-21T210419.383
Published on

ಬೆಂಗಳೂರು: ಕಿರಿಕ್​ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್​ ಕ್ರಶ್​​ ಆಗಿದ್ದಾರೆ. ಸದ್ಯ ಸೌತ್​ ಮತ್ತು ಬಾಲಿವುಡ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ ಬಿಸಿಯಾಗಿದ್ದಾರೆ. ತಮ್ಮ ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಆಕರ್ಷಿಸುವ ರಶ್ಮಿಕಾ ಸ್ಮೈಲ್​ ಎಂದರೆ ಫ್ಯಾನ್ಸ್​ಗೆ ಬಲುಇಷ್ಟ. ತಮ್ಮ ನಗುವಿನ ಮುತ್ತಿನಂತೆ ಹೊಳೆಯುವ ಹಲ್ಲಿನ ಸಿಕ್ರೇಟ್ ಅನ್ನು ನಟಿ ರಿವೀಲ್​ ಮಾಡಿದ್ದಾರೆ. ತಾನು ಬಳಸುವುದು ವಿಶೇಷ ಟೂತ್​ಪೇಸ್ಟ್​ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸದ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಆಕೆಯ ಹಲ್ಲುಗಳು ನೇರಳೆ ಬಣ್ಣದಲ್ಲಿ ಕಾಣುತ್ತವೆ. ವಿಶೇಷ ರೀತಿಯ ಟೂತ್​ಪೇಸ್​​​​ನಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದಾಗಿದೆ. ಹಲ್ಲುಜ್ಜಿದ ನಂತರ ಆಕೆಯ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತಿವೆ ಮತ್ತು ಇದರೊಂದಿಗೆ ರಶ್ಮಿಕಾ ನಗುತ್ತಿರುವುದನ್ನು ನೋಡಬಹುದು.

ಈ ವಿಡಿಯೋದಲ್ಲಿ ರಶ್ಮಿಕಾ ಯಾವ ಟೂತ್‌ಪೇಸ್ಟ್ ಬಳಸುತ್ತಾರೆ? ಈ ಟೂತ್​ಪೇಸ್ಟ್ ಕೋಲ್ಗೇಟ್​​ ಬ್ರ್ಯಾಂಡ್ ಆಗಿದೆ. ಅದರ ಹೆಸರು ಕೋಲ್ಗೇಟ್ ಆಪ್ಟಿಕ್ ವೈಟ್ ಪರ್ಪಲ್ ಟೂತ್ ಪೇಸ್ಟ್. ಇದು ಪೇಟೆಂಟ್ ಪಡೆದ ಬಿಳಿಮಾಡುವ ಸೂತ್ರದೊಂದಿಗೆ ತಯಾರಿಸಲ್ಪಟ್ಟಿದೆ. ಈ ಉತ್ಪನ್ನವು ಶೇ.95ರಷ್ಟು ಕಲೆಗಳನ್ನು ತೆಗೆದುಹಾಕುತ್ತದೆ ಎಂದು ಹೇಳಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾದ ರಶ್ಮಿಕಾ ಅವರ ಈ ವಿಡಿಯೋದಲ್ಲಿ ಅವರ ನಗು ಮತ್ತು ಮ್ಯಾನರಿಸಂಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೆಲವರು ಇದೆಲ್ಲಾ ಪ್ರಚಾರದ ಗಿಮಿಕ್ ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net