VIDEO: ಸ್ಕೈಡೈವಿಂಗ್ ಮೂಲಕ ಜೆರ್ಸಿ ಅನಾವರಣಗೊಳಿಸಿದ ರಾಜಸ್ಥಾನ ರಾಯಲ್ಸ್..!

Jersi
Published on

ದುಬೈ: ಅರಬ್ ರಾಷ್ಟ್ರದಲ್ಲಿ ನಡೆಯಲಿರುವ 13ನೇ ಐಪಿಎಲ್‌ಗೆ 8 ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಈಗಾಗಲೇ ಎಲ್ಲ ತಂಡಗಳು ಅಂತಿಮ ಹಂತದ ಸಿದ್ಧತೆಯಲ್ಲಿವೆ. ಜತೆಗೆ ಬಹುಮುಖ್ಯವಾದ ಜೆರ್ಸಿ ಅನಾವರಣಗೊಳಿಸುತ್ತಿವೆ. ಅದ್ದೂರಿ ಸಮಾರಂಭದ ಬದಲಿಗೆ ವಿಶಿಷ್ಠ ರೀತಿಯಲ್ಲಿ ಬಿಡುಗಡೆ ಮಾಡುತ್ತಿವೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜಸ್ಥಾನ ರಾಯಲ್ಸ್ ತಂಡ ಆಟಗಾರರಿಗೆ ತಿಳಿಯದೇ ಜೆರ್ಸಿ ಅನಾವರಣಗೊಳಿಸಿ ಅಚ್ಚರಿ ಮೂಡಿಸಿದೆ. ಆಟಗಾರರು ಬೀಚ್‌ನಲ್ಲಿ ಕಾಲಕಳೆಯುತ್ತಿದ್ದ ವೇಳೆ ಸ್ಕೈಡೈವಿಂಗ್ ಮೂಲಕ ಆಗಮಿಸಿದ ವ್ಯಕ್ತಿಯೊಬ್ಬರ ಜೆರ್ಸಿಗಳಿರುವ ಬ್ಯಾಗ್‌ವೊಂದನ್ನು ಕೆಳಗಿಟ್ಟು ಹೋಗುತ್ತಾನೆ. ಈ ವೇಳೆ ಅಚ್ಚರಿಯಿಂದ ಹೋಗಿ ಆಟಗಾರನೊಬ್ಬ ಬ್ಯಾಗ್ ತೆರೆದಾಗ ಆಟಗಾರರ ಜೆರ್ಸಿ ಇರುತ್ತದೆ.

ರಾಜಸ್ಥಾನ ರಾಯಲ್ಸ್ ತಂಡ ದುಬೈನಲ್ಲಿರುವ ರಾಯಲ್ ಮೆರಜ್ ರೆಸಾರ್ಟ್‌ನಲ್ಲಿ ಉಳಿದುಕೊಂಡಿದೆ. ಬುಧವಾರ ಬೆಳಗ್ಗೆ ಅಭ್ಯಾಸ ಮುಗಿಸಿ ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ವೇಳೆ ಫ್ರಾಂಚೈಸಿ ಆಟಗಾರರಿಗೆ ಜೆರ್ಸಿ ಅನಾವರಣಗೊಳಿಸಿ ಅಚ್ಚರಿ ಮೂಡಿಸಿದೆ. ಸೆ.19 ರಿಂದ ನ.10ರವರೆಗೆ ಯುಎಇಯ ದುಬೈ, ಶಾರ್ಜಾ, ದುಬೈನಲ್ಲಿ ಪಂದ್ಯಗಳು ನಡೆಯಲಿವೆ.

ರಾಜಸ್ಥಾನ ರಾಯಲ್ಸ್ ತಂಡ ಸೆ.22 ರಂದು ಶಾರ್ಜಾದಲ್ಲಿ ಸಿಎಸ್‌ಕೆ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ದುಬೈನಲ್ಲಿ ಸೆ.30 ರಂದು ಕೆಕೆಆರ್ ವಿರುದ್ಧ ಮೊದಲ ಪಂದ್ಯವಾಡಿದರೆ, ಅ.3 ರಂದು ಅಬುಧಾಬಿಯಲ್ಲಿ ಆರ್‌ಸಿಬಿ ವಿರುದ್ಧ ಮೊದಲ ಪಂದ್ಯವಾಡಲಿದೆ. ಕನ್ನಡಿಗರಾದ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಹಾಗೂ ಅನಿರುದ್ಧ ಜೋಷಿ ರಾಜಸ್ಥಾನ ತಂಡದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net