More

    ಬ್ಯಾಡ್ಮಿಂಟನ್: ಪಿವಿ ಸಿಂಧು, ಶ್ರೀಕಾಂತ್‌ಗೆ ಭಾರತ ತಂಡಗಳ ಸಾರಥ್ಯ

    ನವದೆಹಲಿ: ವಿಶ್ವ ಚಾಂಪಿಯನ್ ಪಿವಿ ಸಿಂಧು ಹಾಗೂ ಮಾಜಿ ವಿಶ್ವ ನಂ.1 ಕಿಡಂಬಿ ಶ್ರೀಕಾಂತ್ ಮುಂದಿನ ತಿಂಗಳು ಡೆನ್ಮಾರ್ಕ್‌ನಲ್ಲಿ ನಡೆಯಲಿರುವ ಥಾಮಸ್ ಹಾಗೂ ಉಬೇರ್ ಕಪ್ ಟೂರ್ನಿಗೆ 20 ಸದಸ್ಯರ ಭಾರತ ಬ್ಯಾಡ್ಮಿಂಟನ್ ತಂಡಕ್ಕೆ ಸಾರಥ್ಯ ವಹಿಸಿದ್ದಾರೆ. ಗಾಯದ ಸಮಸ್ಯೆಯಿಂದ ವಿಶ್ವ ಚಾಂಪಿಯನ್ ಕಂಚಿನ ಪದಕ ವಿಜೇತ ಬಿ.ಸಾಯಿ ಪ್ರಣೀತ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಶ್ರೀಕಾಂತ್ ಜತೆಗೆ 2014ರ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಪಿ.ಕಶ್ಯಪ್ ಹಾಗೂ ಯುವ ಆಟಗಾರ ಲಕ್ಷ್ಯ ಸೇನ್ ತಂಡದಲ್ಲಿದ್ದಾರೆ. ಈ ಮೊದಲು ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹಿಂದೆ ಸರಿದಿದ್ದ ಪಿವಿ ಸಿಂಧು ಬಿಎಐ ಅಧ್ಯಕ್ಷ ಹಿಮಂತ್ ಬಿಸ್ವಾಸ್ ಮನವೊಲಿಸಿದರು. ಟೂರ್ನಿ ಸಂಬಂಧ ಸೆ.7 ರಿಂದ 27 ರವರೆಗೆ ಹೈದರಾಬಾದ್‌ನಲ್ಲಿ ನಿಗದಿಪಡಿಸಲಾಗಿದ್ದ ತರಬೇತಿ ಶಿಬಿರವನ್ನು ರದ್ದುಗೊಳಿಸಲಾಗಿದೆ.

    ಇದನ್ನೂ ಓದಿ: VIDEO| ಚಲಿಸುವ ಬಸ್​ ಮೇಲೆ ಬಿತ್ತು ರೋಹಿತ್​ ಶರ್ಮಾ ಬಾರಿಸಿದ ಸಿಕ್ಸರ್​​ ಚೆಂಡು..!

    ಕರೊನಾ ಕಾಲದಲ್ಲಿ ನಡೆಯುತ್ತಿರುವ ಮೊದಲ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್ ಟೂರ್ನಿ ಇದಾಗಿದೆ. ಜತೆಗೆ ಹಲವು ಪ್ರಮುಖ ತಂಡಗಳ ಟೂರ್ನಿಯಿಂದ ಹಿಂದೆ ಸರಿದಿದ್ದು, ಭಾರತ ತಂಡಕ್ಕೆ ಪದಕ ಜಯಿಸುವ ಉತ್ತಮ ಅವಕಾಶವಿದೆ. ಮಾಜಿ ವಿಶ್ವ ನಂ.1 ಸೈನಾ ನೆಹ್ವಾಲ್, ಕಾಮನ್ವೆಲ್ತ್ ಗೇಮ್ಸ್ ಪದಕ ಜೋಡಿ ಅಶ್ವಿನಿ ಪೊನ್ನಪ್ಪ, ಸಿಕ್ಕಿ ರೆಡ್ಡಿ, ತಂಡದಲ್ಲಿರುವ ಪ್ರಮುಖರು. ಥಾಮಸ್ ಕಪ್‌ನಲ್ಲಿ ಭಾರತ ಸಿ ಗುಂಪಿನಲ್ಲಿದ್ದು, ಉಬೇರ್ ಕಪ್‌ನಲ್ಲಿ ಭಾರತ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

    ಬ್ಯಾಡ್ಮಿಂಟನ್: ಪಿವಿ ಸಿಂಧು, ಶ್ರೀಕಾಂತ್‌ಗೆ ಭಾರತ ತಂಡಗಳ ಸಾರಥ್ಯಥಾಮಸ್ ಕಪ್ ತಂಡ: ಕೆ.ಶ್ರೀಕಾಂತ್, ಪಿ ಶ್ರೀಕಾಂತ್, ಲಕ್ಷ್ಯ ಸೇನ್, ಸುಭಾಂಕರ್ ಡೇ, ಸಿರಿಲ್ ವರ್ಮ, ಮನು ಅತ್ರಿ, ಸುಮೀತ್ ರೆಡ್ಡಿ, ಎಂಆರ್ ಅರ್ಜುನ್, ಧ್ರುವ್ ಕಪಿಲಾ, ಕೃಷ್ಣಪ್ರಸಾದ್ ಗರಗ.

    ಉಬೇರ್ ಕಪ್: ಪಿವಿ ಸಿಂಧು, ಸೈನಾ ನೆಹ್ವಾಲ್, ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೂದ್, ಅಶ್ವಿನಿ ಪೊನ್ನಪ್ಪ, ಸಿಕ್ಕಿ ರೆಡ್ಡಿ, ಪೂಜಾ ದಂದು, ಸಂಜನಾ ಸಂತೋಷ್, ಪೂರ್ವಶಿ ಎಸ್ ರಾಮ್, ಜೆ.ಮೇಘನಾ.

    ಡೆನ್ಮಾರ್ಕ್ ಓಪನ್ (ಅ.13 ರಿಂದ 16), ಡೆನ್ಮಾರ್ಕ್ ಮಾಸ್ಟರ್ಸ್‌ (ಅ.20-25): ಕೆ.ಶ್ರೀಕಾಂತ್, ಸೈನಾ ನೆಹ್ವಾಲ್, ಲಕ್ಷ್ಯ ಸೇನ್, ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧು, ಸಿಕ್ಕಿ ರೆಡ್ಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts