More

    ದಸರಾ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ

    ಕೊಟ್ಟೂರು: ದಸರಾ ಕ್ರೀಡಾಕೂಟಕ್ಕೆ ಪಟ್ಟಣದ ಸಿಪಿಇಡಿ ಮೈದಾನದಲ್ಲಿ ವಿಧ್ಯುಕ್ತಕವಾಗಿ ಗುರುವಾರ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ, ಕ್ಷೇತ್ರ ಶಿಕ್ಷಣಧಿಕಾರಿಗಳ ಕಚೇರಿ ಜಂಟಿಯಾಗಿ ಈ ಕ್ರೀಡಾಕೂಟ ಆಯೋಜಿಸಿದೆ. ಪುರುಷರ ವಿಭಾಗದ ಖೋ ಖೋ ಪಂದ್ಯದಲ್ಲಿ 7, ಕಬಡ್ಡಿ ಪಂದ್ಯಕ್ಕೆ 14, ಬಾಲಿಬಾಲ್ ಪಂದ್ಯಾವಳಿಯಲ್ಲಿ 12, ಬಾಲ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ 10, ಥ್ರೋಬಾಲ್ ಪಂದ್ಯಕ್ಕೆ 3 ತಂಡಗಳು, ಮಹಿಳೆಯರ ವಿಭಾಗದಲ್ಲಿ ಖೋ ಖೋ 3, ಕಬಡ್ಡಿ, ಥ್ರೋ ಬಾಲ್, ವಾಲಿ ಬಾಲ್, ಬಾಲ್ ಬ್ಯಾಡ್ಮಿಂಟನ್ ಪಂದ್ಯಕ್ಕೆ 2 ತಂಡಗಳು ಭಾಗವಹಿಸಿವೆ. ಹೆಚ್ಚವರಿಯಾಗಿ ಏಕ ವ್ಯಕ್ತಿ ಕ್ರೀಡೆಗಳನ್ನು ಆಯೋಜಿಸಲಾಗಿದೆ. ದೈಹಿಕ ಶಿಕ್ಷಕರಾದ ಬಿ.ಪಿ.ಮಂಜುನಾಥ್, ಎಂ. ಶಶಿಧರ, ವಿ.ಮಂಜುನಾಥ್, ಪಾರ್ವತಮ್ಮ, ಇಷಾಕ್ ಬಾಗಳಿ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts