

Raj Tarun Case: ಕಳೆದ ವರ್ಷ ತನ್ನ ಪ್ರೇಯಸಿ ಲಾವಣ್ಯ ಕೊಟ್ಟ ದೂರಿನಿಂದ ದೊಡ್ಡ ಮಟ್ಟದ ವಿವಾದಕ್ಕೆ ಗುರಿಯಾಗಿದ್ದ ಟಾಲಿವುಡ್ ಯುವ ನಟ ರಾಜ್ ತರುಣ್, ಲಾವಣ್ಯಾಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಮದುವೆಯಾಗುವುದಾಗಿ ಭರವಸೆ ಕೊಟ್ಟು ವಂಚಿಸಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂದು ಲಾವಣ್ಯಳಿಂದ ಗಂಭೀರ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ತೀರ ಮನನೊಂದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಇಂದಿನವರೆಗೂ ಬೂದಿ ಮುಚ್ಚಿದ ಕೆಂಡದಂತಿರುವ ಪ್ರಕರಣಕ್ಕೆ ಒಂದಲ್ಲ ಒಂದು ಬಿಗ್ ಟ್ವಿಸ್ಟ್ ಎದುರಾಗುತ್ತಲೇ ಇದೆ.
ರಾಜ್ ತರುಣ್- ಲಾವಣ್ಯ ಪ್ರಕರಣ ದೊಡ್ಡ ಸಂಚಲನವನ್ನೇ ಮೂಡಿಸಿದ್ದು, ಟಾಲಿವುಡ್ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿ ಕಾಡಿತು. ಕಳೆದ ವರ್ಷ ಆರಂಭವಾದ ಈ ವಿವಾದ ಇನ್ನೂ ಬಗೆಹರಿಯದೆ ಮುಂದೋಗುತ್ತಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ. ಆರೋಪಿ ಮಸ್ತಾನ್ ಸಾಯಿ ಬಂಧಿತನಾದ ನಂತರ ಈ ಪ್ರಕರಣದ ಬೆಳವಣಿಗೆ ಸಂಪೂರ್ಣವಾಗಿ ಕಣ್ಮರೆಯಾಗಿತ್ತು. ನಟನ ಅಭಿಮಾನಿಗಳು ಕೂಡ ಇದೇ ಇಲ್ಲಿಗೆ ಮುಗಿಯಿತು ಎಂದೇ ಭಾವಿಸಿದ್ದರು. ಆದರೆ, ಇವರಿಬ್ಬರ ವಿವಾದಕ್ಕೆ ಕೊನೆಯೇ ಇಲ್ಲ ಎನ್ನುವುದಕ್ಕೆ ಈಗ ಮತ್ತೊಂದು ಘಟನೆ ಸಾಕ್ಷಿಯಾಗಿದೆ.
ಇತ್ತೀಚೆಗಷ್ಟೇ ಆರೋಪಿ ಮಸ್ತಾನ್ ಸಾಯಿ ಬಂಧಿತನಾದ ಬೆನ್ನಲ್ಲೇ ರಾಜ್ ತರುಣ್ ಮೇಲೆ ಅನುಕಂಪ ತೋರಿದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆದಿದ್ದರು. ಆದರೆ, ಈ ಮಧ್ಯೆ, ರಾಜ್ ತರುಣ್- ಲಾವಣ್ಯ ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಯುವ ನಟನ ಪೋಷಕರು ಲಾವಣ್ಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ರಾಜ್ ತರುಣ್ ಪೋಷಕರು ಕೋಕಾಪೇಟ್‌ನಲ್ಲಿರುವ ಲಾವಣ್ಯ ನಿವಾಸಕ್ಕೆ ತೆರಳಿ, ಇದು ನನ್ನ ಮಗನ ಮನೆ. ನಮಗೆ ಸೇರಿದ್ದು ಎಂದು ವಾದಿಸಿದ್ದಾರೆ. ಈ ವಿಷಯಕ್ಕೆ ಜಗಳ ನಡೆದು,ಲಾವಣ್ಯ ಮೇಲೆ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಲಾವಣ್ಯ ಮನೆಯ ವಸ್ತುಗಳನ್ನು ಧ್ವಂಸಗೊಳಿಸಿ, ಆಕೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಲಾವಣ್ಯ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭಿಸಬೇಕಿದೆ.
11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ತನಗೆ ರಾಜ್ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ ಎಂದು ಪಣತೊಟ್ಟ ಲಾವಣ್ಯ ಒಂದೆಡೆಯಾದರೆ, ಪೊಲೀಸರು ಕಳಿಸಿರುವ ವಿಚಾರಣಾ ನೋಟಿಸ್ಗೆ ಲಾಯರ್ ಮೂಲಕ ಪ್ರತಿಕ್ರಿಯಿಸಿರುವ ರಾಜ್ ತರುಣ್, ಮೊದಲ ವಿಚಾರಣೆಗೆ ಗೈರಾಗಿದ್ದರು. ಇವರಿಬ್ಬರ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಈಗ ಶಾಕಿಂಗ್ ವಿಚಾರ ಹೊರಬಿದ್ದಿದೆ. ಲಾವಣ್ಯಳ ಖಾಸಗಿ ದೃಶ್ಯ ಚಿತ್ರೀಕರಿಸಿ, ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಆರೋಪಿ ಮಸ್ತಾನ್ ಸಾಯಿನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಲಾವಣ್ಯ ದೂರಿನ ಆಧಾರದ ಮೇರೆಗೆ ಮಸ್ತಾನ್ ಸಾಯಿನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ ತರುಣ್ ತನ್ನೊಂದಿಗೆ ಸಂಬಂಧ ಕಡಿದುಕೊಳ್ಳಲು ಮಸ್ತಾನ್ ಸಾಯಿ ಕಾರಣ ಎಂದು ಲಾವಣ್ಯ ತಮ್ಮ ದೂರಿನಲ್ಲಿ ತಿಳಿಸಿದ್ದರು. ನನ್ನ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ಆಗಾಗ್ಗೆ ಬ್ಲ್ಯಾಕ್‌ಮೇಲ್ ಮಾಡ್ತಿದ್ದ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಸ್ತಾನ್ ಸಾಯಿ ಹಲವಾರು ಹುಡುಗಿಯರು ಖಾಸಗಿಯಾಗಿದ್ದಾಗ ಅವರೊಂದಿಗೆ ಇರುವ ವೀಡಿಯೊಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ ಮತ್ತು ಆ ವೀಡಿಯೊಗಳನ್ನು ಮುಂದಿಟ್ಟು ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಲಾವಣ್ಯ ಅವರ ಕೆಲವು ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಯಿತು,(ಏಜೆನ್ಸೀಸ್).