ರಾಜ್​ ತರುಣ್​-ಲಾವಣ್ಯ ಕೇಸ್​ಗೆ ಮತ್ತೊಂದು ಟ್ವಿಸ್ಟ್​! ಲೀಕ್​ ಆಯ್ತು ರಾಜ್​, ಮಾಳ್ವಿ ಮಲ್ಹೋತ್ರಾ ಲವ್ವಿಡವ್ವಿ ಮೆಸೇಜ್

ವಿಜಯವಾಣಿ (88)
Published on

ತೆಲಂಗಾಣ: 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಆರೋಪ ಹೊರಿಸಿದ್ದಾರೆ. ಇತ್ತೀಚೆಗಷ್ಟೇ ತನ್ನ ವಕೀಲರಿಗೆ ಮಧ್ಯರಾತ್ರಿ ಸಂದೇಶ ಕಳಿಸುವ ಮೂಲಕ ತನಗೆ ಅನ್ಯಾಯವಾಗಿದೆ ಎಂದು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದ ಲಾವಣ್ಯಗೆ ಪೊಲೀಸರು ಬುದ್ಧಿಹೇಳಿ, ಸಾವಿನ ದವಡೆಯಿಂದ ಪಾರು ಮಾಡಿದ್ದರು. ಸದ್ಯ ಇವರಿಬ್ಬರ ವಿಚಾರ ಇದೀಗ ಟಾಲಿವುಡ್​ ಚಿತ್ರರಂಗದಲ್ಲಿ ವಿವಾದದ ಅಲೆಯನ್ನೇ ಸೃಷ್ಟಿಸಿದ್ದು, ಚಿತ್ರರಂಗದವರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ.

ಇತ್ತೀಚೆಗಷ್ಟೇ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಲಾವಣ್ಯ ದಾಖಲಿಸಿದ್ದ ದೂರಿನ ಮೇರೆಗೆ ಪೊಲೀಸರು ನಟ ರಾಜ್ ತರುಣ್​ರನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಕಳುಹಿಸಿದ್ದರು. ಜುಲೈ 18ರೊಳಗೆ ವಿಚಾರಣೆಗೆ ಬರಬೇಕು ಎಂದು ಖಡಕ್ ಸೂಚನೆ ಕೂಡ ಕೊಟ್ಟಿದ್ದರು. ಆದ್ರೆ, ಇದನ್ನು ತಪ್ಪಿಸಿದ ಆರೋಪಿ ರಾಜ್, ತನ್ನ ವಕೀಲರಿಂದ ಪೊಲೀಸರ ನೋಟಿಸ್​ಗೆ ಉತ್ತರಿಸಿದ್ದು, ನಾನು ಊರಿನಲ್ಲಿ ಇರಲಿಲ್ಲ. ಆದ ಕಾರಣ ಬರಲು ಸಾಧ್ಯವಾಗಿಲ್ಲ ಎಂದು ಹೇಳಿಸಿದ್ದ. ಸದ್ಯ ಇವರಿಬ್ಬರ ಕೇಸ್​ಗೆ ಮತ್ತೊಂದು ಟ್ವಿಸ್ಟ್​ ಎದುರಾಗಿದ್ದು, ಆರೋಪಿ ಸ್ಥಾನದಲ್ಲಿರುವ ನಟಿ ಮಾಳ್ವಿ ಮತ್ತು ರಾಜ್​ ನಡುವಿನ ಸಂದೇಶಗಳು ಇದೀಗ ಸೋರಿಕೆಯಾಗಿವೆ.

ಲಾವಣ್ಯಳ ಆರೋಪದ ಪ್ರಕಾರ, ನಟಿ ಮಾಳ್ವಿ ಜತೆಗೆ ಅನೈತಿಕ ಸಂಬಂಧ ಹೊಂದಿರುವ ರಾಜ್​, ಆಕೆಯೊಂದಿಗೆ ಸೇರಿ ತನಗೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಲ್ಲೂ ಪ್ರತ್ಯೇಕವಾಗಿ ನಾನು ನ್ಯಾಯಕ್ಕಾಗಿ ಹೋರಾಡುವೆ. ಸಾಯುವುದಕ್ಕೂ ಸಿದ್ಧ. ನನ್ನ ದುರಂತ ಸಾವು ಕಂಡರೆ ಅದಕ್ಕೆ ಖಂಡಿತ ಮಾಳ್ವಿ ಮತ್ತು ರಾಜ್ ತರುಣ್ ನೇರ ಹೊಣೆ ಎಂದು ಪೊಲೀಸರ ಬಳಿ ಮನವಿ ಮಾಡುತ್ತ ಕಣ್ಣೀರಿಟ್ಟಿದ್ದರು. ಇದೀಗ ಅವರಿಬ್ಬರ ವ್ಯಾಟ್ಸಾಪ್ ಸಂದೇಶಗಳು ಸೋರಿಕೆಯಾಗಿದ್ದು, ಇದನ್ನು ಯಾರು ಲೀಕ್ ಮಾಡಿದರು ಎಂಬುದು ಸದ್ಯ ಗೌಪ್ಯವಾಗಿಯೇ ಉಳಿದಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಗಳ ಪ್ರಕಾರ, ತಮ್ಮ ಸಂಭಾಷಣೆಗಳ ಸಮಯದಲ್ಲಿ ರಾಜ್ ತರುಣ್ ತನ್ನ ಫೋನ್ ಮೂಲಕ ಮಾಳ್ವಿ ಮಲ್ಹೋತ್ರಾಗೆ ಈ ರೀತಿ ತನ್ನ ಪ್ರೀತಿಯ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾನೆ. "ಐ ಲವ್ ಯೂ ಮೋರ್ ಅಂಡ್​ ಕಿಸ್​ ಯೂ ಮೋರ್​. ಅದ್ಯಾಕೋ ಈಗ ನಾನು ಹದಿಹರೆಯದವನಂತೆ ಆಡ್ತಿದ್ದೀನಿ" ಎಂಬ ಮೆಸೇಜ್​ಗಳು ಭಾರೀ ವೈರಲ್ ಆಗಿವೆ. ಸದ್ಯ ಇಲ್ಲಿಂದ ಮುಂದೇನು ಎಂಬುದೇ ಅನೇಕರ ಪ್ರಶ್ನೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net