ಬೆಂಗಳೂರು: ಹಲವು ದಿನಗಳಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ಮಳೆ ಇಳಿಮುಖವಾಗಿದೆ. ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಬಿಸಿಲು ವಾತಾವರಣ ಕಾಣಿಸಿಕೊಂಡಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಾತ್ರ ಮುಂದಿನ ಮೂರು ದಿನ ತುಸು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅರ್ಲಟ್ ಇದೆ. ಆದರೆ. ಮಳೆ ತೀವ್ರತೆ ಅಷ್ಟೊಂದು ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆ ಭಾಗಗಳಲ್ಲಿ ಈಗಾಗಲೇ ಬಿಸಿಲು ವಾತಾವರಣ ಉಂಟಾಗಿದ್ದು, ಆ.8ರಿಂದ ಅಲ್ಲಿಯೂ ಮಳೆ ಕ್ಷೀಣವಾಗಲಿದೆ.
ಪ್ರಸ್ತುತ ಹವಾಮಾನ ಸ್ಥಿತಿ ಗಮನಿಸಿದರೆ ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಚಿಕ್ಕಮಗಳೂರು, ವಿಜಯನಗರ, ದಾವಣಗೆರೆ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಆ.5ರಿಂದ ಆ.11ರವರೆಗೆ ಮಳೆ ಇರುವುದಿಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.
ಲಂಕಾ ಕೊಟ್ಟ ಶಾಕ್ನಿಂದ ತಲೆಕೆಳಗಾಯಿತು ಗಂಭೀರ್ ಲೆಕ್ಕಾಚಾರ! ಒತ್ತಡಕ್ಕೆ ಸಿಲುಕಿದ ಗೌತಿ
3 ತಾಲೂಕುಗಳಲ್ಲಿ ಮಳೆ ಕೊರತೆ:
ರಾಜ್ಯದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ಸುರಿದರೂ ಆರು ತಾಲೂಕುಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂ.1ರಿಂದ ಆ.3ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ ಒಟ್ಟಾರೆ 498 ಮಿಮೀ ಮಳೆಯಾಗಬೇಕಿತ್ತು. ಆದರೆ, 655 ಮಿಮೀ ಮಳೆ ಬಿದ್ದಿದ್ದು, ವಾಡಿಕೆಗಿಂತ ಶೇ.32ರಷ್ಟು ಅಧಿಕವಾಗಿ ಸುರಿದಿದೆ. ಈ ವೇಳೆ 47 ತಾಲೂಕಿನಲ್ಲಿ ವಾಡಿಕೆಗಿಂತ ಅತಿ ಅಧಿಕ, 111 ತಾಲೂಕುಗಳಲ್ಲಿ ಅಧಿಕ, 72 ತಾಲೂಕಿನಲ್ಲಿ ವಾಡಿಕೆಯಷ್ಟೇ ಮಳೆಯಾದರೆ, 6 ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ.