

ಕಡಬ: ಆಲಂಕಾರು ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಯಿಂದ ಈ ಭಾಗದ ಕೃಷಿಗೆ ಹಾನಿ ಸಂಭವಿಸಿದೆ. ಕುಂತೂರು, ಪೆರಾಬೆ, ಹಳೆನೇರಂಕಿ, ಕೊಲ ಮೊದಲಾದ ಕಡೆ ಭಾರಿ ಮಳೆ ಸುರಿದಿದ್ದು, ರೈತರ ಅಡಕೆ ತೋಟಗಳು ಸಂಪೂರ್ಣ ಜಲಾವೃತ್ತಗೊಂಡಿತ್ತು. ಅಡಕೆ, ತೆಂಗಿನ ತೋಟಗಳಿಗೆ ಹಾಕಿದ್ದ ರಸಗೊಬ್ಬರ, ಹಟ್ಟಿಗೊಬ್ಬರ ನೀರುಪಾಲಾಗಿದೆ. ಅಲ್ಲದೆ ಗಾಳಿಗೆ ಬಾಳೆಗಿಡಗಳು, ರಬ್ಬರ್ ಮರಗಳು ಧರಾಶಾಯಿಯಾಗಿವೆ.