

ಮೂಡುಬಿದಿರೆ: ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಸೈಬರ್ ಕ್ರೈಮ್, ಡ್ರಗ್ ಟ್ರಾಫಿಕಿಂಗ್ ಹಾಗೂ ಸೋಶಿಯಲ್ ಆ್ಯಂಡ್ ಲೀಗಲ್ ಇಂಪ್ಲಿಕೇಶನ್ಸ್ ವಿಷಯ ಕುರಿತು ವಿಶೇಷ ಉಪನ್ಯಾಸ ಸೋಮವಾರದಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ ಮಾತನಾಡಿ, ಸೈಬರ್ ಅಪರಾಧಗಳು ಇಂದು ಅತ್ಯಂತ ಸಂಕೀರ್ಣ ಹಾಗೂ ಕಾನೂನು ಜಾರಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿವೆ. ವಂಚಕರು ಈಗ ಅಸಲಿಯಂತೆ ಕಾಣುವ, ನಕಲಿ ಹೂಡಿಕೆ ವೆಬ್‌ಸೈಟ್ ಲಿಂಕ್‌ಗಳನ್ನು ಸೃಷ್ಟಿಸುತ್ತಿದ್ದಾರೆ. ದೇಶದೊಳಗೆ ಕಾರ್ಯನಿರ್ವಹಿಸುವ ವಂಚಕರನ್ನು ಬಂಧಿಸಿ, ಹಣವನ್ನು ವಾಪಸ್ ಪಡೆಯಲು ಪ್ರಯತ್ನಿಸಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಮಹಾಂತೇಶ್ ಜಿ.ಎಸ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಸಾಧನಾ ಜಿ.ಎಸ್. ನಿರೂಪಿಸಿದರು. ನಿಶಾಂತ್ ಅತಿಥಿಗಳನ್ನು ಪರಿಚಯಿಸಿ, ನಿಷಿ ವಂದಿಸಿದರು.