ಸ್ವಾವಲಂಬಿ ಬದುಕಿನಿಂದ ಗ್ರಾಮೀಣ ಅಭಿವೃದ್ಧಿ : ಡಾ.ಜಿ.ರಾಮಕೃಷ್ಣ ಆಚಾರ್ ಹೇಳಿಕೆ

New Project (26)
Published on

ಮೂಡುಬಿದಿರೆ: ಸ್ವಾವಲಂಬಿ ಬದುಕು ಎಂದರೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರವಾಗಿ ಬದುಕುವುದಾಗಿದೆ. ನಾವು ಹುಟ್ಟಿದ ನೆಲದಲ್ಲಿ ಬದುಕನ್ನು ಕಂಡುಕೊಂಡು ಸ್ವಾವಲಂಬಿ ಬದುಕಿನ ಮೂಲಕ ಗ್ರಾಮೀಣ ಅಭಿವೃದ್ಧಿಯ ತೊಡಗಿಸಿಕೊಳ್ಳುವುದಕ್ಕಿಂತ ಶ್ರೇಷ್ಠ ಕೆಲಸ ಇನ್ನೊಂದಿಲ್ಲ ಎಂದು ಬನ್ನಡ್ಕ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ. ಅಧ್ಯಕ್ಷ ಡಾ.ಜಿ.ರಾಮಕೃಷ್ಣ ಆಚಾರ್ ಹೇಳಿದರು.

ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಸ್ವ-ಉದ್ಯೋಗ ಮತ್ತು ಗ್ರಾಮೀಣಾಭಿವೃದ್ಧಿ’ ಎಂಬ ವಿಷಯದ ಕುರಿತು ಮಾತನಾಡಿದರು.

ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ, ಸದಸ್ಯರಾದ ಭರತ್ ಕುಮಾರ್, ರಾಜೇಶ್ವರಿ ನಾಯಕ್, ಶಿಬಿರಾಧಿಕಾರಿ ತೇಜಸ್ವಿ ಭಟ್, ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಡಾ.ವಾದಿರಾಜ ಕಲ್ಲೂರಾಯ, ವಿಕ್ರಮ ನಾಯಕ್, ಸೌಮ್ಯಾ, ಸಂಧ್ಯಾ, ಪ್ರಿಯಾಂಕ, ಪ್ರದೀಪ್ ಕೆ., ಅಶೋಕ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಸೃಷ್ಟಿ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net