ಕಾರ್ಕಳದಲ್ಲಿ ನಿಲ್ಲದ ವರುಣಾರ್ಭಟ

KKL_Rain Effect
Published on

ತಾಲೂಕಾದ್ಯಂತ ಮಳೆಯ ಅರ್ಭಟ ಮುಂದುವರಿದಿದ್ದು, ಮಂಗಳವಾರವೂ ಭಾರಿ ಮಳೆಯಾಗಿದೆ. ಇದರಿಂದ ಹಲವೆಡೆ ಅಪಾರ ಹಾನಿ, ನಷ್ಟ ಉಂಟಾಗಿದೆ.

ನಿಟ್ಟೆ ಗ್ರಾಮದ ಪದವು ನಿವಾಸಿ ರಾಜು, ಪೊಸರ್‌ಗುಡ್ಡೆ ನಿವಾಸಿ ಸುಂದರ, ಪಟ್ರಬೆಟ್ಟು ಮನೆಯ ಪ್ರದೀಪ್ ಪುಜಾರಿ ಅವರ ಮನೆಗಳಿಗೆ ಹಾನಿಯಾಗಿವೆ.

ಮುಡಾರಿನ ಸುಗುಣಾ ಶೆಟ್ಟಿ, ಸದಾಶಿವ, ವಸಂತ ಜೈನ್, ನೂರಳ್‌ಬೆಟ್ಟು ಸುಮಿತ್ರಾ ದೇವಿ, ಅಣ್ಣಿ ದೇವಾಡಿಗ, ಮುಂಡ್ಕೂರು ಗ್ರಾಮದ ಸಂಕಲಕರಿಯ ನಿವಾಸಿ ಅಶೋಕ್ ಶೆಟ್ಟಿ, ಗಂಗೆನೀರು ನಿವಾಸಿ ಕೇಶವ ಮೂಲ್ಯ ಅವರ ತೋಟದ ಬೆಳೆಗಳು ನಾಶವಾಗಿವೆ.

ಕಾರ್ಕಳ ನಗರದ ಭವಾನಿ ಶಂಕರ ಎಂಬುವರ ಕಟ್ಟಡದ ಶೀಟ್ ಗಾಳಿಗೆ ಹಾರಿ ಹಾನಿಯಾಗಿದೆ. ಕಲ್ಯಾ ಗ್ರಾಮದ ಕುಂಟಾಡಿ ನಿವಾಸಿ ಶಂಕರ್ ಪುಜಾರಿ ಎಂಬುವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು ನಷ್ಟವಾಗಿದೆ. ಅಲ್ಲದೇ ಭಾರಿ ಗಾಳಿಯಿಂದಾಗಿ ಕಲ್ಮಠ ಸೂರ್ಯನಾರಾಯಣ ಮಠದ ಮೇಲ್ಛಾವಣಿಯ ಕಬ್ಬಿಣದ ರಾಡ್ ಸಹಿತ ಶೀಟ್‌ಗೆ ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net