ಇ-ಸಿಮ್ ಮಾಡುವುದಾಗಿ ತಿಳಿಸಿ ಲಕ್ಷ ರೂ. ವಂಚನೆ

Udp_E Sim
Published on

ಉಡುಪಿ: ಮೊಬೈಲ್ ಹಾಕಿರುವ ಸಿಮ್ ಅನ್ನು ಇ-ಸಿಮ್ ಆಗಿ ಪರಿವರ್ತಿಸಬೇಕಿದೆ ಎಂದು ವಂಚಿಸಿ ವ್ಯಕ್ತಿಯೋರ್ವರ ಖಾತೆಯಿಂದ ಒಂದು ಲಕ್ಷ ರೂ. ಎಗರಿಸಲಾಗಿದೆ.

ಮಣಿಪಾಲದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸ್ತವ್ಯ ಮಾಡಿರುವ ಪರಾಗ್ ಪುಷ್ಪನ್ ಎಂಬುವರಿಗೆ ಜುಲೈ 13ರಂದು ಅಪರಿಚಿತನೋರ್ವ ಮೊಬೈಲ್ ಕರೆ ಮಾಡಿ, ತಾನು ಕಸ್ಟಮರ್ ಕೇರ್‌ನಿಂದ ವಾತನಾಡುವುದಾಗಿ ತಿಳಿಸಿದ್ದಾನೆ. ನಿಮ್ಮ ಸಿಮ್ ಅನ್ನು ಇ-ಸಿಮ್ ವಾಡಬೇಕಿದೆ ಎಂದು ತಿಳಿಸಿ, ವ್ಯಾಟ್ಸಾೃಪ್ ಸ್ಕ್ರೀನ್ ಶೇರ್ ವಾಡುವಂತೆ ಹೇಳಿದ್ದು, ನಿಜವೆಂದು ನಂಬಿ ಜಿಯೋ ಆ್ಯಪ್ ಮೂಲಕ ಕಳುಹಿಸಿದ್ದರು. ಬಳಿಕ ಅಪರಿಚಿತ ವ್ಯಕ್ತಿಯು ವಾರದಲ್ಲಿ ಮೂರು ಬಾರಿ ಸಿಮ್ಮನ್ನು ಡಿಆಕ್ಟಿವೇಟ್ ವಾಡಿದ್ದನು. ತದನಂತರ ಜಿಯೋ ಕಸ್ಟಮರ್ ಕೇರ್‌ಗೆ ಫೋನ್ ವಾಡಿ ಸಿಮ್ ಆಕ್ಟಿವೇಟ್ ಮಾಡಿಸಿಕೊಂಡಿದ್ದರು. ಜುಲೈ 20ರಂದು ಪರಾಗ್ ಅವರ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ 48 ಸಾವಿರ, 49 ಸಾವಿರ ಹಾಗೂ 3 ಸಾವಿರ ರೂ. ಸೇರಿ 1 ಲಕ್ಷ ರೂ.ವನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದು,ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net