

ಹೆಬ್ರಿ: ಇಲ್ಲಿನ ಸೀತಾನದಿ ಬ್ರಹ್ಮಸ್ಥಾನದ ಬಳಿ ಸೋಮವಾರ ಭಾರಿ ಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಗಾತ್ರದ ಮರಗಳು ಉರುಳಿದ್ದು, ಈ ಕಾರಣಕ್ಕಾಗಿ ಹೆಬ್ರಿಯಿಂದ ನೆಲ್ಲಿಕಟ್ಟೆಗೆ ಸಂಚರಿಸುವ ಬಸ್ ಅರ್ಧದಲ್ಲಿ ಪ್ರಯಾಣಿಕರನ್ನು ಇಳಿಸಿ ತೆರಳಿದೆ. ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಶಾಲೆ ತಲುಪಲು ಸಾಧ್ಯವಾಗದೆ, ಪರ್ಯಾಯ ರಸ್ತೆಯಲ್ಲಿ ನಡೆದುಕೊಂಡು ಶಾಲೆಯತ್ತ ಸಾಗಿದ್ದಾರೆ. ಘಟನೆಗೆ ಪ್ರಯಾಣಿಕರ ಸಹಿತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.