ಕುಂದಾಪುರ ತಾಲೂಕಿನಾದ್ಯಂತ ಮಳೆ ಹಾನಿ

rain
Published on

ಕುಂದಾಪುರ: ಕುಂದಾಪುರ ತಾಲೂಕಿನಾದ್ಯಂತ ಗುರುವಾರ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶಗಳಲ್ಲಿ ಮತ್ತೆ ಕೃತಕ ನೆರೆ ಸೃಷ್ಟಿಯಾಗಿತ್ತು. ಭಾರಿ ಗಾಳಿ ಮಳೆಗೆ ಹಲವೆಡೆ ಹಾನಿ ಮುಂದುವರಿದಿದೆ.

ಬೀಜಾಡಿ ಗ್ರಾಮದ ಕಾಮ್ತಿಯರಬೆಟ್ಟು ನಿವಾಸಿ ನಾಗು ಎಂಬುವರ ಮನೆ ಮೇಲೆ ಮರ ನಷ್ಟ ಸಂಭವಿಸಿದೆ. ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ, ಹೊಸಾಡು ಗ್ರಾಮದ ಗಾಣದಮಕ್ಕಿ ಎಂಬಲ್ಲಿ ಸಂಜೀವ ಕೊರಗ ಎಂಬುವರ ಮನೆ ಹಾನಿಗೀಡಾಗಿವೆ. ಹೊಸಾಡು ಗ್ರಾಮದ ಗಾಣದಮಕ್ಕಿ ಎಂಬಲ್ಲಿ ಸಾಕು ಕೊರಗ ಎಂಬುವರ ಮನೆ ಭಾಗಶಃ ಹಾನಿಯಾಗಿದೆ. ಹಕ್ಲಾಡಿ ಗ್ರಾಮದ ಶಶಿಕಾಂತ ದಾಸ್ ಎಂಬುವರ ತೋಟದಲ್ಲಿ 14 ಅಡಕೆ ಮರಗಳು ಹಾನಿಗೀಡಾಗಿವೆ. ಹಂಗ್ಲೂರು ಗ್ರಾಮದ ರಘುನಾಥ ಆಚಾರ್ ಎಂಬುವರ ಮನೆ, ಶೌಚಗೃಹ, ಕುಂದಾಪುರದ ಚಿಕನ್‌ಸಾಲ್ ರಸ್ತೆಯ ನಿವಾಸಿ ಸುಮತಿ ಎಂಬುವರ ಮನೆಯ ಮೇಲ್ಛಾವಣಿ ಕುಸಿದು ನಷ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net