ಆರೋಗ್ಯ ಉಚಿತ ತಪಾಸಣಾ ಶಿಬಿರ

Health camp
Published on

ಕುಂದಾಪುರ: ದುರ್ಗಾಂಬಾ ಮೋಟಾರ್ಸ್ ಕುಂದಾಪುರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಎನ್‌ಸಿಸಿ (ಆರ್ಮಿ ಮತ್ತು ನೇವಿ) ಮತ್ತು ರಾಷ್ಟ್ರೀಯ ಸೇವಾ ಯೋಜನೆ ಟಕಗಳ ಸಹಯೋಗದಲ್ಲಿ ಬೃಹತ್ ಆರೋಗ್ಯ ಉಚಿತ ತಪಾಸಣಾ ಶಿಬಿರ ಮತ್ತು ದಂತ ಚಿಕಿತ್ಸಾ ಉಚಿತ ಶಿಬಿರ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ವೆಂಕಟರಮಣ ಪ್ರಭು ರಂಗ ಮಂದಿರದಲ್ಲಿ ಜೂನ್ 1ರಂದು ನಡೆಯಲಿದೆ.

ಇಸಿಜಿ, ಮಧುಮೇಹ, ರಕ್ತದೊತ್ತಡ, ರಕ್ತ ತಪಾಸಣೆ, ಬಾಯಿ ಮತ್ತು ಹಲ್ಲುಗಳ ಸಂಪೂರ್ಣ ತಪಾಸಣೆ ಮತ್ತು ಸಲಹೆ, ಬಾಯಿಯಲ್ಲಿ ಇರಬಹುದಾದ ಇತರೆ ಸಣ್ಣ ಪುಟ್ಟ ಗಡ್ಡೆಯ ನ್ಯೂನತೆಗಳಿಗೆ ಸರಳ ಚಿಕಿತ್ಸೆ ಒದಗಿಸಲಾಗುವುದು ಮತ್ತು ಅಗತ್ಯವೆನಿಸಿದರೆ ಲಭ್ಯವಿರುವ ಔಷಧಿ ನೀಡಲಾಗುವುದು ಎಂದು ಸಂಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net