ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಶನಿವಾರವೂ ಭಾರಿ ಮಳೆ ಸುರಿದಿದ್ದು, ಇರ್ವತ್ತೂರು ಗ್ರಾಮದ ನವೀನ್ ಮೂಲ್ಯ ಎಂಬುವರ ದನದ ಹಟ್ಟಿಗೆ ಹಾನಿಯಾಗಿದೆ. ಕೊಳ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ವೀರಕಂಬ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ಎಂಬುವರ ಮನೆಯ ಗೋಡೆ ಕುಸಿದು ನಷ್ಟ ಉಂಟಾಗಿದೆ. ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯಲ್ಲಿ ಅಬ್ದುಲ್ ಖಾದರ್ ಎಂಬುವರ ಮನೆಗೆ ಹಾನಿಯಾಗಿದೆ.
ಯೂನುಸ್ ಎಂಬವರ ಮನೆ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ. ಪೆರ್ನೆ ಗ್ರಾಮದ ಗಿಟ್ಟದಡ್ಕ ಸೀತಾ ಶಿವಪ್ಪ ನಾಯ್ಕ ಎಂಬವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆಗೂ ಹಾನಿಯಾಗಿದೆ. ಕುರಿಯಾಳ ಗ್ರಾಮದ ಕುರಿಯಾಳ ಪಡು ಎಂಬಲ್ಲಿ ಉಗ್ಗಪ್ಪ ಪೂಜಾರಿ ಅವರ ಕೊಟ್ಟಿಗೆಗೆ ಹಾನಿಯಾಗಿದೆ.
ಕೊಳ್ನಾಡು ಗ್ರಾಮದ ಮಜಲು ಎಂಬಲ್ಲಿ ರಾಮಣ್ಣ ನಾಯಕ್ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವುದು 1). ವೀರಕಂಬ ಗ್ರಾಮದ ಬಾಯಿಲ ಎಂಬಲ್ಲಿ ಕಲ್ಯಾಣಿ ಎಂಬುವರ ಮನೆಯ ಗೋಡೆ ಕುಸಿದಿರುವುದು 2).