ಕಾಸರಗೋಡು: ಬಿರುಸಿನ ಗಾಳಿಗೆ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಅಡ್ಕಸ್ಥಳದಲ್ಲಿ ಬೃಹತ್ ಆಲದ ಮರದ ರೆಂಬೆ ಮುರಿದು ರಸ್ತೆಗೆ ಬಿದ್ದು, ತಾಸುಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ರಸ್ತೆಗೆ ಬಿದ್ದ ಮರ ತೆರವುಗೊಳಿಸಿದ ನಂತರ ಸಂಚಾರ ಸುಗಮಗೊಳಿಸಲಾಯಿತು.
ಧರೆ ಕುಸಿದು ಹಾನಿ
ಕಾಸರಗೋಡು ಮೀಪುಗುರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸನಿಹದ ನಿವಾಸಿ ಜಯರಾಮ ಶೆಟ್ಟಿ ಎಂಬುವರ ಮನೆ ಸನಿಹದ ಆವರಣಗೋಡೆ ಕುಸಿದು ಮನೆಗೆ ಹಾನಿಯುಂಟಾಗಿದೆ.