

ನವದೆಹಲಿ: ಪ್ರಯಾಣಿಕ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ಐಆರ್ಸಿಟಿಸಿ ವೆಬ್ಸೈಟ್ಗೆ ಲಾಗಿನ್ ಆಗುವವರ ಸಂಖ್ಯೆ ಅಧಿಕಗೊಂಡ ಹಿನ್ನೆಲೆಯಲ್ಲಿ ವೆಬ್ಸೈಟ್ ಕೆಲ ಸ್ಥಗಿತಗೊಂಡಿದೆ.
ವೆಬ್ಸೈಟ್ ಸ್ಥಗಿತಗೊಂಡಿದಕ್ಕೆ ವಿಷಾದ ವ್ಯಕ್ತಪಡಿಸಿರುವ ರೈಲ್ವೇ ಮಂಡಳಿ ಶೀಘ್ರದಲ್ಲೇ ವೆಬ್ಸೈಟ್ ಸರಿಪಡಿಸುವುದಾಗಿ ಟ್ವಿಟ್ ಮಾಡಿದೆ.
ಇದನ್ನೂ ಓದಿ ರೇಷ್ಮೆ ಬೆಳೆಗಾರರು ಕಾದರೂ ಬಾರದ ಡಿಸಿಎಂ
ವಿಶೇಷ ರೈಲುಗಳಿಗೆ ಸಂಬಂಧಿಸಿದ ಡೇಟಾವನ್ನು ಐಆರ್ಸಿಟಿಸಿ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗುತ್ತಿದೆ. ಕೆಲವೇ ಸಮಯದಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಲಭ್ಯವಾಗಲಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಕೇವಲ ಪ್ಯಾಸೆಂಜರ್ ರೈಲುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. (ಏಜೆನ್ಸೀಸ್)