More

    ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಚಾರ ಯಾವಾಗ ಶುರುವಾಗುತ್ತೆ?

    ಬೆಳಗಾವಿ: ದೇಶದಾದ್ಯಂತ ಪ್ರಯಾಣಿಕ ರೈಲುಗಳ ಸೇವೆಯನ್ನು ಮೊದಲ ಹಂತವಾಗಿ 15 ಮಾರ್ಗಗಳಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ಬೆನ್ನಿಗೇ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಯಾವಾಗ ಶುರುವಾಗುತ್ತದೆ ಎಂಬ ಯೋಚನೆ ಜನರ ಮನಸ್ಸಿನಲ್ಲಿ ಸುಳಿದಾಡತೊಡಗಿದೆ.

    ಈ ಕುರಿತು ಬೆಳಗಾವಿಯಲ್ಲಿ ಸೋಮವಾರ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು.

    ‘‘ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಆರಂಭಿಸುವ ಕುರಿತು ರಾಜ್ಯ ಸರ್ಕಾರವೇ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದೆ’’ ಎಂದು ಅವರು ಉತ್ತರಿಸಿದರು.

    ಇದನ್ನೂ ಓದಿ ಮುಂಬೈನಿಂದ ಬಂದು ಸುತ್ತ ಹತ್ತೂರು ಓಡಾಡಿದವನಿಗೆ ಕರೊನಾ ಸೋಂಕು; ಜಿಲ್ಲಾಡಳಿತಕ್ಕೆ ತಲೆನೋವು..

    ‘‘ಸದ್ಯ 15 ಪ್ರಯಾಣಿಕ ರೈಲುಗಳ ಸಂಚಾರವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಸ್ಥಳೀಯ ಮಟ್ಟದಲ್ಲಿ ರೈಲು ಸೇವೆ ಆರಂಭಿಸುವ ಕುರಿತು ಆಯಾ ರಾಜ್ಯ ಸರ್ಕಾರಗಳೇ ತೀರ್ಮಾನಿಸಲಿವೆ’’ ಎಂದು ಸಚಿವ ಅಂಗಡಿ ತಿಳಿಸಿದರು.

    ‘ನಮ್ಮ ಮೆಟ್ರೋ’ ಸೇವೆ ಪುನರಾರಂಭಿಸುವ ಕುರಿತು ಬಿಎಂಆರ್‌ಸಿಎಲ್ ಕೂಡ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ರಾಜ್ಯ ಸರ್ಕಾರವು ಬಿಎಂಟಿಸಿ ಮತ್ತು ಇತರ ನಗರಗಳಲ್ಲಿ ಬಸ್ ಸಂಚಾರ ಆರಂಭಿಸಿದ ತಕ್ಷಣವೇ ಮೆಟ್ರೋ ರೈಲು ಸೇವೆ ಕೂಡ ಆರಂಭವಾಗುವ ಸಾಧ್ಯತೆ ಇದೆ.

    ಒಂದು ಮೂಲದ ಪ್ರಕಾರ, ಮೇ 20ರೊಳಗೆ ಕೆಲವು ಷರತ್ತುಗಳೊಂದಿಗೆ ನಗರದಲ್ಲಿ ಬಸ್ ಸಂಚಾರ ಮತ್ತು ಮೆಟ್ರೋ ರೈಲು ಸೇವೆ ಪುನರಾರಂಭವಾಗುವ ನಿರೀಕ್ಷೆ ಇದೆ.

    VIDEO |ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರನ್ನು ಪ್ರಭಾವಗೊಳಿಸಿದ ಈ ವಿಡಿಯೋ ಯಾವುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts